×
Ad

ಮಂಗಳೂರು: ಪ್ರೀತಿಸಿ ಮದುವೆಯಾಗಿ ವಂಚನೆ; ಯುವತಿ ಆರೋಪ

Update: 2017-02-22 18:29 IST

ಮಂಗಳೂರು, ಫೆ.23: ಪ್ರೀತಿಸಿ ತನ್ನನ್ನು ಮದುವೆಯಾಗಿದ್ದಲ್ಲದೆ, ಗುಪ್ತವಾಗಿ ಇನ್ನೊಬ್ಬಳನ್ನು ವಿವಾಹವಾಗುವ ಮೂಲಕ ವಂಚನೆ ನಡೆಸಿ ತನ್ನನ್ನು ಬೀದಿಗೆ ತಳ್ಳಲಾಗಿದೆ ಎಂದು ದಲಿತ ಯುವತಿ ಆರೋಪಿಸಿದ್ದಾರೆ.

 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲತಾ ಯಾನೆ ಲಲಿತಾ, ಹಾಸನ ಜಿಲ್ಲೆಯ ತಾನು ಹೋಂ ನರ್ಸಿಂಗ್ ಮಾಡಲು ಮಂಗಳೂರಿಗೆ ಬಂದಿದ್ದೆ. ಆವಾಗ ವಾಮಂಜೂರಿನ ಐತಪ್ಪಪೂಜಾರಿಯ ಮಗ ಗಿರೀಶ್‌ನ ಪರಿಚಯವಾಗಿತ್ತು. 2005ರಲ್ಲಿ ಧರ್ಮಸ್ಥಳದಲ್ಲಿ ನಾವಿಬ್ಬರು ಮದುವೆಯಾಗಿ ಬಾಡಿಗೆ ಮನೆಯಲ್ಲಿ ಸಂಸಾರ ಸಾಗಿಸತೊಡಗಿದೆವು. ಬಳಿಕ ಹಾಸನದ ಚೆನ್ನಕೇಶವ ದೇವಸ್ಥಾನದಲ್ಲಿ ಮದುವೆಯೂ ಆಗಿದೆ. 2016ರಲ್ಲಿ ರಿಜಿಸ್ಟಾರ್ ನೋಂದಣಿಯಾಗಿದೆ. ನಮಗೆ 12 ವರ್ಷದ ಪುತ್ರನೊಬ್ಬನಿದ್ದಾನೆ ಎಂದರು.

 ತನಗೆ ವಾಮಂಜೂರಿನಲ್ಲಿ ಲಾರಿ ಹಾಗೂ ಕಲ್ಲಿನ ಕೋರೆ ಇದೆ ಎಂದು ಗಿರೀಶ್ ಹೇಳಿದ್ದರು. ತಾನು ಬಜ್ಪೆ, ಕಾವೂರು, ಯೆಯ್ಯೆಡಿ, ಉರ್ವಸ್ಟೋರ್, ಶಕ್ತಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರೂ ತನ್ನ ಸ್ವಂತ ಮನೆಗೆ ಕರೆದುಕೊಂಡು ಹೋಗಿರಲಿಲ್ಲ. ಸ್ವಂತ ಮನೆಗೆ ಕರೆದುಕೊಂಡು ಹೋಗಿ ಎಂದು ಕೇಳಿಕೊಂಡರೂ ದಿನಕ್ಕೊಂದು ಸಬೂಬು ಹೇಳುತ್ತಿದ್ದರು. ಆದರೆ, ಗಿರೀಶ್ ಅದಕ್ಕೆ ಸ್ಪಂದಿಸಿರಲಿಲ್ಲ. ಅಂತೂ ಒಂದು ದಿನ ತಾನು ಗಿರೀಶ್‌ರ ಮನೆಗೆ ಹೋದೆ. ಆವಾಗ ಗಿರೀಶ್ ಮತ್ತೊಂದು ಮದುವೆಯಾಗಿರುವುದು ಮತ್ತು ಇಬ್ಬರು ಮಕ್ಕಳಿರುವುದು ತಿಳಿಯಿತು. ಇದನ್ನು ತಾನು ಪ್ರಶ್ನಿಸಿದಾಗ ಗಿರೀಶನ ತಮ್ಮ ಜಗ್ಗ, ತಾಯಿ ಮತ್ತು ಎರಡನೆ ಪತ್ನಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಗೆ ದೂರು ನೀಡಿದರೂ ಸರಿಯಾದ ವಿಚಾರಣೆ ನಡೆಸದೆ ಹಿಂಬರಹ ನೀಡಿದ್ದಾರೆ ಎಂದು ಲಲಿತಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News