ಕೊಯಿಲ ಕೋಮುಗಲಭೆ ಯತ್ನ: ಆರೋಪಿಗಳಿಗೆ ಜಾಮೀನು

Update: 2017-02-22 14:15 GMT

ಉಪ್ಪಿನಂಗಡಿ, ಫೆ.22:  ಮಂಗಳವಾರ ಇಲ್ಲಿನ ಸಮೀಪದ ಕೊಯಿಲ ಜನತಾ ಕಾಲೋನಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯ ಜೊತೆಗೆ ಆಕೆಯ ಹಿಂದೂ ಗೆಳತಿಯರು ಮನೆಗೆ ಬಂದಿರುವುದನ್ನು ಖಂಡಿಸಿ ಕೋಮುಗಲಭೆಗೆ ಪ್ರಯತ್ನಿಸುತಿದ್ದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಇದೀಗ ಆರೋಪಿಗಳಾದ ಸಿರಾಜ್, ಬಶೀರ್, ಅರಾಫತ್, ಶರೀಫ್, ತೌಸೀಫ್ ಪುತ್ತೂರಿನ ಎಸಿಜೆ & ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುತ್ತಾರೆ.

ಘಟನೆಯ ಹಿನ್ನೆಲೆ: 

ಜನತಾ ಕಾಲೋನಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯ ಜೊತೆಗೆ ಆಕೆಯ ಹಿಂದೂ ಗೆಳತಿಯರು ಮನೆಗೆ ಬಂದಿರುವುದನ್ನುವಿರೋಧಿಸಿದ್ದ ಸಂಘ ಪರಿವಾರದ ಕೆಲವರು ಮನೆಯೊಳಗೆ ಅತಿಕ್ರಮಣ ಪ್ರವೇಶಿಸಿ ದಾಂಧಲೆ ಮಾಡಿದ್ದರು.

ಈ ಕೃತ್ಯವನ್ನು ವಿರೋಧಿಸಿ ಮುಸ್ಲಿಂ ಸಮುದಾಯದ ಯುವಕರು ಕೂಡಾ ಗುಂಪು ಸೇರಿದ್ದು ಅಲ್ಲಿ ಇತ್ತಂಡಗಳ ನಡುವೆ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿ ಜಿಲ್ಲಾ ವರಿಷ್ಟಾಧಿಕಾರಿಗಳು ಸೇರಿದಂತೆ ಪ್ರಮುಖ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು.

ಈ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಇತ್ತಂಡಗಳ ವಿರುದ್ದ ಪ್ರಕರಣ ದಾಖಲಿಸಿದ್ದು, ಸಿರಾಜ್, ಬಶೀರ್, ಅರಾಫತ್, ಶರೀಫ್, ತೌಸೀಫ್ ಬಂದಿಸಿದ್ದರು.

ಆರೋಪಿಗಳ ಪರವಾಗಿ ವಕೀಲರಾದ ಅಬ್ದುಲ್ ಮಜೀದ್ ಖಾನ್, ಇಬ್ರಾಹಿಂ ಬಾತಿಷ್ ಯು.ಕೆ., ಖಲಂದರ್ ಕೊಯಿಲ, ಸೈಪುದ್ದೀನ್ ಆತೂರು , ರಹಿಮಾನ್ ಬಂಡಾಡಿ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News