ಮಹಿಳೆಯೋರ್ವಳಿಗೆ ಡ್ರಾಪ್ ಕೊಡುವುದಾಗಿ ಹೇಳಿದ ಆರೋಪಿಗಳ ಬಂಧನ !
ಅಂಕೋಲಾ, ಫೆ.22: ಮಹಿಳೆಯೊರ್ವಳಿಗೆ ಆಟೋರಿಕ್ಷಾ ನಿಲ್ಲಿಸಿ ಡ್ರಾಪ್ ಕೊಡುತ್ತೇವೆ ಎಂದು ಹೇಳಿದ ಆರು ಮಂದಿ ಆರೋಪಿಗಳಿಗೆ ಪೊಲೀಸರು ಬುಧವಾರ ತಾಲೂಕಾ ದಂಡಾಧಿಕಾರಿವರ ಬಳಿ ಹಾಜರುಪಡಿಸಿ, ಮಾ.15ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಕಾರವಾರ ಜೈಲಿಗೆ ಹಳುಹಿಸಿದ್ದಾರೆ.
ಹುಬ್ಬಳ್ಳಿ ಮೂಲದ ಹಳೆ ಹುಬ್ಬಳ್ಳಿ ಇಸ್ಲಾಂಪುರದ ಮುಹಮ್ಮದ್ ಹಸನ್(19), ಗಿರಣಿಚಾಳದ ದಾಸ್ತಾನ ಹುಸೈನ ಸಾಬ್(19), ಜಾವೇದ ರಿಯಾಜ ಅಹ್ಮದ (18), ಜಗದೀಶ ನಗರದ ನಾಗರಾಜ ಮೋತಿಲಾಲ ದೋಂಗಡೆ (32), ದೇವ ರಾಜ ನಗರದ ಸುನೀಲ ತಾಳಿಕೋಟೆ (21), ವಿಕಾಸ ನಗರದ ಜಾನಸನ್ ಸ್ಟಾಲಿನ್ ಪುನಿತ್ (27) ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ.
ಇವರು ಹುಬ್ಬಳ್ಳಿಯಿಂದ ಗೋಕರ್ಣ ಹನಿ ಬೀಚ್‌ಗೆ ಎರಡು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಂಕಸಾಳ ಸಮೀಪ ಇಬ್ಬರು ಆರೋಪಿಗಳು ರಸ್ತೆಯಲ್ಲಿ ಮಹಿಳೆಯೋರ್ವಳು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ನಿಮಗೆ ಡ್ರಾಪ್ ನೀಡುತ್ತೇನೆ ಎಂದು ಹೇಳಿದಕ್ಕೆ ಆಕೆ ಭಯಗೊಂಡು ಬೈಕ್ ಸವಾರನೋರ್ವ ಸಹಾಯದಿಂದ ಸುಂಕಸಾಳ ಪೊಲೀಸರಿಗೆ ಸುದ್ದಿ ತಿಳಿಸಿರುತ್ತಾಳೆ.
ಪಿಐ ಬಿ.ಡಿ.ಬುರ್ಲಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಎರಡು ರಿಕ್ಷಾ ಮತ್ತು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾಗ ಹುಬ್ಬಳ್ಳಿ ವಿವಿಧ ಪೊಲೀಸ ಠಾಣೆಯಲ್ಲಿ ಮೂವರು ಆರೋಪಿಗಳ ಬಂಗಾರ ಚೈನ್ ಅಪಹರಣ ಪ್ರಕರಣ ಮತ್ತು ಹುಬ್ಬಳ್ಳಿ ಕೇಶವಪುರ ಠಾಣೆಯಲ್ಲಿ ಎಂಓಬಿ ದಾಖಲೆ ಆಗಿರುವುದು ಮಾಹಿತಿ ಕಲೆ ಹಾಕಿದ್ದಾರೆ.
ಈ ಆರೋಪಿಗಳಲ್ಲಿ ಅಂಕೋಲಾದಲ್ಲಿ ಯಾವುದೇ ರೀತಿ ಕಳ್ಳತನ ಪ್ರಕರಣ ದಾಖಲಾಗದ ಕಾರಣ ಮತ್ತು ಯಾವುದೇ ರೀತಿ ಸ್ವತ್ತಿನ ಬಗ್ಗೆ ಮಾಹಿತಿ ಇಲ್ಲಾವಾದ ಕಾರಣ ಕಲಂ 109ರ ಅಡಿಯಲ್ಲಿ ಈ ಆರೋಪಿಗಳ ಮೇಲೆ ಪ್ರತ್ಯೇಕ ಮೂವರು ಪ್ರಕರಣ ದಾಖಲಿಸಿ, ಇವರನ್ನು ತಹಶೀಲ್ದಾರ ಹಾಗೂ ತಾಲೂಕ ದಂಡಾಧಿಕಾರಿ ವಿವೇಕ ವಿ.ಶೆಣ್ವಿ ಅವರ ಹಾಜರು ಪಡಿಸಿದ್ದಾಗ, ಮಾ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.