ಆಳ್ವಾಸ್ ಕಾಲೇಜಿಗೆ 49 ರ‍್ಯಾಂಕ್: ಮಂಗಳೂರು ವಿ.ವಿ ಇತಿಹಾಸದಲ್ಲೇ ಸಾರ್ವತ್ರಿಕ ದಾಖಲೆ
ಮೂಡುಬಿದಿರೆ, ಫೆ.22: ಮಂಗಳೂರು ವಿ.ವಿ.ಯ 2014-16ನೇ ಸ್ನಾತಕೋತ್ತರ ರ‍್ಯಾಂಕ್ ವಿಜೇತರ ಪಟ್ಟಿ ಬಿಡುಗಡೆಯಾಗಿದ್ದು ಮೂಡುಬಿದಿರೆಯ ಆಳ್ವಾಸ್ ಕಾಲೇಜು ವಿವಿಧ ವಿಭಾಗಗಳಲ್ಲಿ 11 ಪ್ರಥಮ ರ‍್ಯಾಂಕ್ ಸಹಿತ ಒಟ್ಟು 28 ರ‍್ಯಾಂಕ್ಗಳನ್ನು ತನ್ನದಾಗಿಸಿಕೊಂಡಿದೆ.
ಮಂಗಳೂರು ವಿ.ವಿ ಇತಿಹಾಸದಲ್ಲೇ ದಾಖಲೆ ಬರೆದಿರುವ ಆಳ್ವಾಸ್ ಪದವಿ ವಿಭಾಗದಲ್ಲೂ 6 ಪ್ರಥಮ ರ‍್ಯಾಂಕ್ಗಳೊಂದಿಗೆ 21 ರ‍್ಯಾಂಕ್ ಗಳಿಸಿ, ಸಾಧನೆ ಮೆರೆದಿದೆ. ಮಂಗಳೂರು ವಿ.ವಿ ಇತಿಹಾಸದಲ್ಲೇ ಶಿಕ್ಷಣ ಸಂಸ್ಥೆಯೊಂದು ಗರಿಷ್ಠ ಸಂಖ್ಯೆಯ ರ‍್ಯಾಂಕ್ ಪಡೆದ ಹೆಗ್ಗಳಿಕೆ ಆಳ್ವಾಸ್‌ನದ್ದಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ನಾತಕೋತ್ತರದಲ್ಲಿ 28 ರ‍್ಯಾಂಕ್:
ಸುದರ್ಶನ್ ಶೆಟ್ಟಿ (ಎಂಎಚ್‌ಆರ್‌ಡಿ), ಕೀರ್ತಿ( ಎಂ.ಎ ಇಂಗ್ಲೀಷ್), ಜಯಲಕ್ಷ್ಮೀ( ಅರ್ಥಶಾಸ್ತ್ರ), ಅನ್ನಪೂರ್ಣ ಶೆಟ್ಟಿ( ಭರತನಾಟ್ಯಂ), ದೀವಿತ್.ಎಸ್ ಕೋಟ್ಯಾನ್( ಎಂಸಿಜೆ), ವೆಂಕಟರಮಣ ಪಿ.ಬಿ (ಎಂ.ಎಸ್‌ಸಿ ಗಣಿತಶಾಸ್ತ್ರ), ಜಯಶ್ರೀ ಜೈನ್( ಎಂ. ಎಸ್ಸಿ ಎನೆಲಿಟಿಕಲ್ ಕೆಮಿಷ್ಟ್ರಿ), ಗ್ರೀಷ್ಮಾ ಟಿ.ನಾಯರ್( ಎಂ.ಎಸ್‌ಸಿ ಅಪ್ಲೇಯ್ಡಾ ಬಾಟನಿ), ಸುಪ್ರಜಾ ಲಕ್ಷ್ಮೀ( ಎಂ.ಎಸ್‌ಸಿ ಫುಡ್ ಸೈನ್ಸ್ ಆ್ಯಂಡ್ ನ್ಯುಟ್ರೀಶನ್), ಕವನಾ( ಪಿ.ಜಿ ಡಿಪ್ಲೋಮ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್), ಸೌಮ್ಯಶ್ರೀ ಭಟ್( ಎಂ.ಕಾಂ ಐಬಿಎಂ) ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ವಿಮಾರ್ಶಿ ಸಿ.ಜೈನ್( ಎಂಎಚ್‌ಆರ್‌ಡಿ), ಅಕ್ಷಯಾ.ಬಿ.ಇ( ಎಂ.ಎ ಇಂಗ್ಲೀಷ್), ದಾಕ್ಷಯಿಣಿ ( ಎಂ.ಎ ಅರ್ಥಶಾಸ್ತ್ರ),ಚೇತನ್ ಎಸ್.ಸಿ(ಭರತನಾಟ್ಯಂ),ಹರೀಶ್ ಆರ್ ಎನ್ ( ಎಂ. ಎಸ್ಸಿ ಎನೆಲಿಟಿಕಲ್ ಕೆಮಿಷ್ಟ್ರಿ ),ಸಿ ಎಚ್ ಕುಸುಮಾ ( ಎಂಎಸ್ಸಿ ಕಂಪ್ಯೂಟರ್ ಸೈನ್ಸ್), ಸೀಮಾ ಪ್ರವೀಣ(ಎಂ.ಎಸ್‌ಸಿ ಫುಡ್ ಸೈನ್ಸ್ ಆ್ಯಂಡ್ ನ್ಯುಟ್ರೀಶನ್), ಲೋಲಿಟಾ ಎಡ್ನಾ ಡಿಸೋಜಾ (ಪಿ.ಜಿ ಡಿಪ್ಲೋಮ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್), ಸುಪ್ರೀತಾ (ಎಂಕಾಂ ಐಬಿಎಂ) ದ್ವಿತೀಯಾ ರ‍್ಯಾಂಕ್ ಗಳಿಸಿದ್ದಾರೆ.
ರಶ್ಮಿತಾ (ಎಂಕಾಂ), ನಿಶ್ಚಿತಾ ಜಿ ಹೊಳ್ಳ (ಎಂಎಚ್‌ಆರ್‌ಡಿ), ರಕ್ಷಿತಾ ಕುಮಾರಿ ಟಿ.ಡಿ ( ಎಂಸಿಜೆ), ಸೂರಜ್ ದಾದನ್ನವರ್(ಎಂ. ಎಸ್ಸಿ ಎನೆಲಿಟಿಕಲ್ ಕೆಮಿಷ್ಟ್ರಿ ), ಕುನಲ್ ಜಿ.ಎಸ್ ( ಎಂಎಸ್ಸಿ ಕಂಪ್ಯೂಟರ್ ಸೈನ್ಸ್), ಕೃತಿಕಾ ಎನ್ ಜಿ (ಎಂ.ಎಸ್‌ಸಿ ಫುಡ್ ಎಂಡ್ ಸೈನ್ಸ್), ಪ್ರಿಯಾ ( ಎಂಕಾಂ ಐಬಿಎಂ) ತೃತೀಯಾ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳು.
ಅನೂಪ್ ಎಚ್.ಎನ್ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದಲ್ಲಿ ಚತುರ್ಥ ರ‍್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ. ಆಳ್ವಾಸ್ ಕಾಲೇಜಿನ ಪದವಿ ವಿಭಾಗದ 2015-16 ಸಾಲಿನ ವಿದ್ಯಾರ್ಥಿಗಳು ಒಟ್ಟು 6 ಪ್ರಥಮ, 3 ದ್ವಿತೀಯ, 5 ತೃತಿಯಾ, ಎರಡು 5ನೇ ರ‍್ಯಾಂಕ್, ಎರಡು 6ನೇ ರ‍್ಯಾಂಕ್, 1 ಎಂಟನೇ ರ‍್ಯಾಂಕ್, ಎರಡು ಹತ್ತನೇ ರ‍್ಯಾಂಕ್ ಗಳಿಸಿ ಒಟ್ಟು 21 ರ‍್ಯಾಂಕ್ ಗಳಿಸಿದ್ದಾರೆ.
ಒಟ್ಟು ಪದವಿ ಹಾಗೂ ಸ್ನಾತ್ತಕೋತ್ತರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆ, 49 ರ‍್ಯಾಂಕ್ಗಳನ್ನು ಪಡೆದು ಸಾದನೆ ಮೆರೆದಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ದಾಖಲೆ ನಿರ್ಮಿಸುತ್ತಿರುವುದು ಸಂಸ್ಥೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಡಾ ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟಿದ್ದಾರೆ.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪಿಆರ್‌ಒ ಡಾ. ಪದ್ಮನಾಭ ಶೆಣೈ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.