ಅಪರಿಚಿತ ವಾಹನ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
Update: 2017-02-22 21:20 IST
ಹಿರಿಯಡ್ಕ, ಫೆ.22: ಅಪರಿಚಿತ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಫೆ.21ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಶಿವಪುರದ ಅರುಣ್ ಶೆಟ್ಟಿ(31) ಎಂದು ಗುರುತಿಸಲಾಗಿದೆ. ಇವರು ತನ್ನ ಹೊಂಡಾ ಮ್ಯಾಟ್ರಿಕ್ಸ್ ಸ್ಕೂಟರ್‌ನಲ್ಲಿ ಪೆರ್ಡೂರುನಿಂದ ಹೆಬ್ರಿ ಕಡೆಗೆ ಹೋಗು ತ್ತಿದ್ದಾಗ ಅಪರಿಚಿತ ವಾಹನ ಢಿಕ್ಕಿ ಹೊಡೆಯಿತು. ಇದರಿಂದ ಸ್ಕೂಟರ್ ಸವಾರ ರಸ್ತೆಗೆ ಬಿದ್ದರು. ಆಗ ಡಿಕ್ಕಿ ಹೊಡೆದ ವಾಹನವು ರಸ್ತೆಯಲ್ಲಿ ಬಿದ್ದಿದ್ದ ಸವಾರನ ಹೆಲ್ಮೆಟ್ ಧರಿಸಿದ ತಲೆ ಮೇಲೆ ಚಲಿಸಿತು.
ಇದರಿಂದ ಗಂಭೀರವಾಗಿ ಗಾಯಗೊಂಡ ಅರುಣ್ ಶೆಟ್ಟಿ ಸ್ಥಳದಲ್ಲೇ ಮೃತ ಪಟ್ಟರು. ಡಿಕ್ಕಿ ಹೊಡೆದ ವಾಹನದ ಚಾಲಕ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.