×
Ad

ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2017-02-22 21:22 IST

ಹಿರಿಯಡ್ಕ, ಫೆ.22: ಹೆಬ್ರಿ ಕನ್ಯಾನದ ವಿಠಲ ನಾಯ್ಕ(45) ಎಂಬವರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಪೆರ್ಡೂರು ಕಲ್ಪಂಡೆ ಎಂಬಲ್ಲಿರುವ ಹಾಡಿಯಲ್ಲಿ ಫೆ.21ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಮನೆಯಲ್ಲಿ ಫೆ.12ರಂದು ಇಲಿ ಪಾಷಾಣ ಸೇವಿಸಿ ಅಸ್ವಸ್ಥ ರಾಗಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಪ್ತಿ ಗ್ರಾಮದ ಕೈಲ್ಕೆರೆ ನಿವಾಸಿ ಆನಂದ ಕೊಠಾರಿ(63) ಎಂಬವರು ಫೆ.20ರಂದು ರಾತ್ರಿ 9ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯಡ್ಕ: ಫೆ.17ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪೆರ್ಣಂಕಿಲ ಗ್ರಾಮದ ಜನತಾ ನಗರ ನಿವಾಸಿ ಜಗದೀಶ ನಾಯಕ್(29) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಫೆ.21 ರಂದು ರಾತ್ರಿ 9.30ರ ಸುಮಾರಿಗೆ ಮೃತಪಟ್ಟರು.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News