ನೆರೆಯ ರಾಜ್ಯದ ಮುಖ್ಯ ಮಂತ್ರಿ ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಅಡ್ಡಿ ಪಡಿಸುವುದು ಸಲ್ಲದು: ಜೆಡಿಎಸ್
ಮಂಗಳೂರು,ಫೆ.22:ನೆರೆಯ ರಾಜ್ಯವಾದ ಕೇರಳದ ಮುಖ್ಯ ಮಂತ್ರಿ ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಅಡ್ಡಿ ಪಡಿಸುವುದು ಸಲ್ಲದು ಎಂದು ದ.ಕ ಜಿಲ್ಲಾ ಜೆಡಿಎಸ್ ಪ್ರಕಟನೆಯಲ್ಲಿ ತಿಳಿಸಿದೆ.
ಕೇರಳದಲ್ಲಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ,ಬಜರಂಗದಳ ವಿಶ್ವ ಹಿಂದು ಪರಿಷತ್ ಹಿಂದೂ ಜಾಗರಣಾ ವೇದಿಕೆಗಳು ಫ್ಯಾಸಿಸ್ಟ್ ಪ್ರವೃತ್ತಿಯನ್ನು ತೋರಿಸುತ್ತಿವೆ.ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂಬ ಹೇಳಿಕೆ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಆ ಮಾತನ್ನು ಸಾಭೀತು ಮಾಡಲು ಹೊರಟಂತಿದೆ.ಕೋಮುದ್ವೇಷದ ಭಾವನೆಯನ್ನು ಹರಡುವುದು ಬಿಜೆಪಿ ಅಜೆಂಡಾವಾಗಿದೆ.ವಿನಾಯಕ ಬಾಳಿಗ,ಪ್ರವೀಣ್ ಪೂಜಾರಿ,ಕೃಷ್ಣಯ್ಯ ಪಾಟಾಳಿ,ಪ್ರತಾಪ್ ಮರೋಳಿ,ಭಾಸ್ಕರ ಕುಂಬ್ಳೆ,ಶ್ರೀನಿವಾಸ ಬಜಾಲ್,ಹರೀಶ್ ಭಂಡಾರಿ, ಶಿವರಾಜ್, ಪ್ರಕಾಶ್ ಕುಳಾಯಿ,ಮಣಿ ಕಂಠ,ಹೇಮಂತ್,ಕೇಶವ ಪೂಜಾರಿ ಮುಂತಾದ ಹಿಂದುಯುವಕರ ಕೊಲೆಯಲ್ಲಿ ಭಾಗಿಯಾದವರು ಬಂದ್‌ಗೆ ಕರೆ ನೀಡುತ್ತಿರುವುದು ವಿಪರ್ಯಾಸ.
ಒಕ್ಕೂಟ ವ್ಯವಸ್ಥೆಯಲ್ಲಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇರುವ ರಾಷ್ಟ್ರೀಯ ಪಕ್ಷವೊಂದು ರಾಜ್ಯವೊಂದರ ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಈ ರೀತಿಯ ವಿರೊಧ ವ್ಯಕ್ತ ಪಡಿಸುತ್ತಿರುವುದು ಅವರ ಬೌದ್ಧಿಕ ದಿವಾಳಿ ತನಕ್ಕೆ ಸಾಕ್ಷಿಯಾಗಿದೆ.ಶಾಂತಿ ಕದಡುವ ಗುರಿಯಾಗಿದೆ.ಜವಾಬ್ದಾರಿಯುತ ಸಂಸದರು,ಶಾಸಕರು ಈ ಕಾರ್ಯಕ್ರಮಕ್ಕೆ ವಿರೊಧ ವ್ಯಕ್ತ ಪಡಿಸುವ ವಿಧಾನ ಈ ದೇಶದ ವೌಲ್ಯಗಳಿಗೆ ತಿಲಾಂಜಲಿ ಇಡುವ ಎನ್‌ಡಿಎ ಸರಕಾರದ ಎಜೆಂಡಾದ ಭಾಗವಾಗಿದೆ.ಇದನ್ನು ಜನತಾದಳ ತೀವ್ರವಾಗಿ ಖಂಡಿಸುತ್ತದೆ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ನಡೆಯಲು ಜಿಲ್ಲಾಡಳಿತ ಬಿಗಿಯಾದ ಬಂದೋಬಸ್ತುವಿನ ಕ್ರಮ ಕೈ ಗೊಳ್ಳುವಂತೆ ಜನತಾದಳದ ಮಾಜಿ ಸಚಿವ ಅಮರನಾಥ ಶೆಟ್ಟಿ,ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞ ,ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ,ಹೈದರ್ ಪರ್ತಿಪ್ಪಾಡಿ ಮುಂತಾದವರು ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಿದ್ದಾರೆ.