×
Ad

ಸಂಘಪರಿವಾರದವರಿಂದ ದ.ಕ. ಮತ್ತು ಉಡುಪಿ ಜಿಲ್ಲೆ, ಕೇರಳದಲ್ಲಿ ಹತ್ಯೆಗೀಡಾದ ಹಿಂದೂಗಳ ಪಟ್ಟಿ ಬಿಡುಗೊಳಿಸಿದ ಡಿವೈಎಫ್‌ಐ

Update: 2017-02-22 22:02 IST

ಮಂಗಳೂರು, ಫೆ.22: ಫೆ.25ರಂದು ಸಿಪಿಎಂ ವತಿಯಿಂದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿರುವ ಸೌಹಾರ್ದ ರ‍್ಯಾಲಿಗೆ ಕೇಳರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸುತ್ತಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಸಂಘ ಪರಿವಾರ ಕರೆ ನೀಡಿರುವುದನ್ನು  ಡಿವೈಎಫ್ ಖಂಡಿಸಿದ್ದು, ಜಿಲ್ಲೆಯಲ್ಲಿ ಸಂಘ ಪರಿವಾರದಿಂದ ಹತ್ಯೆಗೀಡಾದ ಹಿಂದೂಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ, ಬಿಜೆಪಿ ಬೂತ್ ಪ್ರಮುಖ ಪ್ರವೀಣ್ ಪೂಜಾರಿ ಉಡುಪಿ, ದೇವಸ್ಥಾನದ ಪೂಜಾರಿ ಕೃಷ್ಣಯ್ಯ ಪಾಟಾಳಿ ಕುಂದಾಪುರ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಪ್ರತಾಪ್ ಮರೋಳಿ, ಡಿವೈಎಫ್‌ಐ ಕಾರ್ಯಕರ್ತ, ಕಾನೂನು ವಿದ್ಯಾರ್ಥಿ ಭಾಸ್ಕರ್ ಕುಂಬ್ಳೆ, ಡಿವೈಎಫ್‌ಐ ಕಾರ್ಯಕರ್ತ ಶ್ರೀನಿವಾಸ ಬಜಾಲ್, ಅಮಾಯಕ ಯುವಕರಾದ ಹರೀಶ್ ಭಂಡಾರಿ ಕುಳಾಯಿ, ಹರೀಶ್ ಪೂಜಾರಿ ಬಂಟ್ವಾಳ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾದ ಶಿವರಾಜ್ ಕೋಡಿಕೆರೆ, ಪ್ರಕಾಶ್ ಕುಳಾಯಿ, ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್, ಬಿಜೆಪಿ ಮುಖಂಡ ಕೇಶವ ಪೂಜಾರಿ ಸೂರಿಂಜೆ ಎಂಬವರು ಸಂಘಪರಿವಾರ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರಿಂದ ಕೊಲೆಗೀಡಾಗಿದ್ದಾರೆ ಎಂದು ಡಿವೈಎಫ್‌ಐ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ವಿವರಿಸಿದೆ.

ಕೇರಳ ರಾಜ್ಯದಲ್ಲಿ ಆರೆಸ್ಸೆಸ್‌ನಿಂದ ಸಿಪಿಎಂ ಹಾಗೂ ಡಿವೈಎಫ್‌ಐ ಕಾರ್ಯಕರ್ತರು ಕೊಲೆಗೀಡಾದವರ ಕ್ಷೇತ್ರವಾರು ಸಂಖ್ಯೆ :

ಕೇರಳದ ಕಾಸರಗೋಡಿನಲ್ಲಿ 12 ಮಂದಿಯನ್ನು ಕೊಲೆ ಮಾಡಲಾಗಿದೆ. ಪಾಲಕ್ಕಾಡ್‌ನಲ್ಲಿ 20 ಮಂದಿ, ಕೊಳಿಕ್ಕೋಡ್‌ನಲ್ಲಿ 10 ಮಂದಿ, ಮಲಪ್ಪುರಂನಲ್ಲಿ ಇಬ್ಬರು, ಕೊಲ್ಲಂನಲ್ಲಿ 9 ಮಂದಿ, ಪಟ್ಟಣಂ ತಿಟ್ಟುನಲ್ಲಿ ನಾಲ್ವರು, ತಿರುವನಂತಪುರಂನಲ್ಲಿ 21 ಮಂದಿ, ಅಲಪ್ಪುಳದಲ್ಲಿ 18 ಮಂದಿ, ಪಾಲಕ್ಕಾಡ್, ಎರ್ನಾಕುಲಂ, ಇಡುಕಿ, ಕೊಟ್ಟಾಯಂಗಳಲ್ಲಿ 6 ಮಂದಿ, ತ್ರಿಶೂರ್‌ನಲ್ಲಿ 31 ಮಂದಿ ಹಾಗೂ ಕಣ್ಣೂರಿನಲ್ಲಿ 74 ಮಂದಿ ಸಿಪಿಎಂ ಮತ್ತು ಡಿವೈಎಫ್‌ಐ ಕಾರ್ಯಕರ್ತರು ಆರೆಸ್ಸೆಸ್‌ನಿಂದ ಕೊಲೆಗೀಡಾಗಿದ್ದಾರೆ ಎಂದು ಡಿವೈಎಫ್‌ಐ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News