ಗಾಂಜಾ ಸೇವನೆ: 6 ಮಂದಿ ಬಂಧನ
ಮಂಗಳೂರು, ಫೆ. 22: ಗಾಂಜಾ ಸೇವನೆ ಮಾಡಿದ್ದ 6 ಮಂದಿ ಯುವಕರನ್ನು ಬಂದರು ಠಾಣಾ ಪೊಲೀಸರು ಬುಧವಾರ ನಗರದ ವಿವಿಧ ಕಡೆಗಳಿಂದ ವಶಕ್ಕೆ ಪಡೆದಿದ್ದಾರೆ.
ಮಡಿಕೇರಿಯ ರಾಜೇಶ್ (22), ಹೇಮಂತ್ (21), ರೇಹಾನ್ (20), ಜೋಕಟ್ಟೆಯ ಹ್ಯಾರಿಸನ್ (21), ಬಜ್ಪೆ ಪೋರ್ಕೋಡಿಯ ಜಾವೇದ್ ಅಖ್ತರ್ (21) ಬೋಳಿಯಾರ್‌ನ ವೀರೇಂದ್ರ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ರಾಜೇಶ್ ಪಿವಿಎಸ್ ವೃತ್ತದ ಬಳಿ, ಹೇಮಂತ್ ಉತ್ತರ ಧಕ್ಕೆಯ ಬಳಿ, ರೇಹಾನ್ ಅಳಕೆ ಬ್ರಿಡ್ಜ್ ಬಳಿ, ಹ್ಯಾರಿಸನ್ ಅರಳಿಕಟ್ಟೆ ಬಸವನಗುಡಿ ಬಳಿ, ಜಾವೇದ್ ಅಖ್ತರ್ ಬಜಿಲಕೇರಿ ಬಳಿ, ವೀರೇಂದ್ರ ಸೆಂಟ್ರಲ್ ಮಾರ್ಕೆಟ್ ಬಳಿಯಿಂದ ಬಂಧಿಸಿದ್ದಾರೆ.
ಗಸ್ತಿನಲ್ಲಿದ್ದ ಬಂದರು ಠಾಣಾ ಇನ್ಸ್‌ಪೆಕ್ಟರ್ ಶಾಂತರಾಮ್, ಪಿಎಸ್‌ಐ ಮದನ್, ಪ್ರೊಬೆಷನರ್ ಪಿಎಸ್‌ಐ ರ ಪವಾರ್, ಸಿಬಂದಿ ಸುಜನ್ ಶೆಟ್ಟಿ, ಮಲ್ಲಪ್ಪ, ಗಣೇಶ್ ಕಾಮತ್ ಅವರು ಆರೋಪಿಗಳನ್ನು ಸಂಶಯದ ಮೇರೆಗೆ ಕರೆದು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಆರೋಪಿಗಳನ್ನು ಬಂಧಿಸಿ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.