×
Ad

ಮಂಗಳೂರು: ರಸ್ತೆ ಅಪಘಾತಕ್ಕೆ ಯುವಕ ಬಲಿ

Update: 2017-02-23 10:45 IST

ಮಂಗಳೂರು, ಫೆ.23: ಸರಕು ಸಾಗಾಟದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ಅಳಕೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಬಾಯಾರು ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಗಣೇಶ್ ಚಲಾಯಿಸುತ್ತಿದ್ದ ಕೆ.ಎ. 19 ಇ.ಜಿ. 5450 ಎಂಬ ನೋಂದಣಿ ಸಂಖ್ಯೆಯ ಸುಝುಕಿ ಆಕ್ಸೆಸ್ ದ್ವಿಚಕ್ರ ವಾಹನಕ್ಕೆ ಕೆನರಾ ಗೂಡ್ಸ್ ಟ್ರಾನ್ಸ್‌ಪೋರ್ಟ್ ಎಂಬ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಗಣೇಶ್ ಅವರ ತಲೆಯ ಮೇಲೆ ಲಾರಿಯ ಹಿಂದಿನ ಚಕ್ರಗಳು ಹರಿದಿದ್ದು, ತಲೆ ಸಂಪೂರ್ಣ ಜಜ್ಜಿ ಹೋಗಿವೆ. ಅವರು ಧರಿಸಿದ್ದ ಹೆಲ್ಮೆಟ್ ತಲೆಯಿಂದ ಕಳಚಿ ದೂರಕ್ಕೆ ಎಸೆಯಲ್ಪಟ್ಟಿದೆ.

ಅಪಘಾತ ಸಂಭವಿಸಿದ ಸುಮಾರು 50 ನಿಮಿಷಗಳ ವರೆಗೆ ಘಟನಾ ಸ್ಥಳಕ್ಕೆ ಆ್ಯಂಬುಲೆನ್ಸ್ ಆಗಮಿಸಲೇ ಇಲ್ಲ. ಮಂಗಳೂರಿನಂತಹ ನಗರದಲ್ಲೇ ಇಂತಹ ಪರಿಸ್ಥಿತಿಯಾದರೆ ಗ್ರಾಮೀಣ ಪ್ರದೇಶಗಳಲ್ಲಿ ಆ್ಯಂಬುಲೆನ್ಸ್ ಸೇವೆ ಹೇಗೆ ಇದ್ದೀತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News