×
Ad

ಟರ್ಕಿಯಲ್ಲಿ ಮಹಿಳಾ ಸೈನಿಕರ ಹಿಜಾಬ್ ನಿಷೇಧ ತೆರವು

Update: 2017-02-23 14:51 IST

ಅಂಕಾರ, ಫೆ. 23: ಟರ್ಕಿಯಲ್ಲಿ ಸೈನಿಕ ಮಹಿಳಾ ಅಧಿಕಾರಿಗಳಿಗೆ ವಿಧಿಸಲಾಗಿದ್ದ ಹಿಜಾಬ್ ನಿಷೇಧವನ್ನು ತೆರವು ಗೊಳಿಸಲಾಗಿದೆ. ರಕ್ಷಣಾ ಸಚಿವಾಲಯದ ಆದೇಶದ ಹಿನ್ನೆಲೆಯಲ್ಲಿ ಸೈನ್ಯದಲ್ಲಿ ಸುಧಾರಣೆ ತರಲಾಗುತ್ತಿದೆ. ಇನ್ನು ಮುಂದೆ ಮಹಿಳಾ ಸೈನಿಕರು ಟೋಪಿಯೊಂದಿಗೆ ಹಿಜಾಬನ್ನು ಧರಿಸಬಹುದಾಗಿದೆ.

ಆದರೆ ಮುಖಮುಚ್ಚುವ ರೀತಿಯಲ್ಲಿ ಹಿಜಾಬ್ ಧರಿಸಬಾರದು. ಅಧಿಕೃತ ಗಝೆಟಿಯರ್‌ನಲ್ಲಿ ಇದು ಪ್ರಕಟಗೊಳ್ಳುವುದರೊಂದಿಗೆ ಹೊಸ ಸುಧಾರಣೆ ಜಾರಿಗೆ ಬರಲಿದೆ. ತೀವ್ರ ಜಾತ್ಯತೀತ ಆಡಳಿತಗಾರರ ಕಾಲದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧಿಸಲಾಗಿತ್ತು. ಇಸ್ಲಾಮಿಕ್ ಹಿನ್ನೆಲೆಯಿರುವ ಜಸ್ಟಿಸ್ ಆಂಡ್ ಡೆವಲಪ್‌ಮೆಂಟ್ ಪಾರ್ಟಿ ಅಧಿಕಾರದಲ್ಲಿದ್ದು, ಹಳೆಯ ನಿರ್ಬಂಧಗಳನ್ನು ಅದು ತೆರವು ಗೊಳಿಸಿದೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News