2030ರಲ್ಲಿ ಆಯಸ್ಸು ಮಿತಿ 90 ವರ್ಷ !

Update: 2017-02-23 09:49 GMT

ಲಂಡನ್, ಫೆ.23: ಹಲವು ದೇಶಗಳಲ್ಲಿ 2030ಕ್ಕಾಗುವಾಗ ಆಯಸ್ಸಿನ ಸರಾಸರಿ ಹೆಚ್ಚಳವಾಗಲಿದೆ ಎಂದು ಇಂಪೀರಿಯಲ್ ಕಾಲೇಜ್ ಲಂಡನ್, ವಿಶ್ವಾರೋಗ್ಯ ಸಂಘಟನೆಯ ವಿಜ್ಞಾನಿಗಳು ನಡೆಸಿದ ಅಧ್ಯಯನ ತಿಳಿಸಿದೆ. 2030ಕ್ಕಾಗುವಾಗ 35 ವಾಣಿಜ್ಯ ಪ್ರಧಾನ ದೇಶಗಳಲ್ಲಿರುವವರ ಆಯಸ್ಸು ವಿಸ್ತಾರವಾಗಲಿದೆ ಎಂದು ಅಧ್ಯಯನದಲ್ಲಿ ಪತ್ತೆಯಾಗಿದೆ.

ಹೆಚ್ಚು ವರಮಾನ ಇರುವ ದೇಶಗಳಾದ ಅಮೆರಿಕ, ಕೆನಡ, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯ ಸಹಿತ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಪೊಲೆಂಡ್, ಮೆಕ್ಸಿಕೊ, ಜೆಕ್ ರಿಪಬ್ಲಿಕ್‌ಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಇದು ತಿಳಿದು ಬಂದಿದೆ. ಇಲ್ಲೆಲ್ಲ 2030ಕ್ಕಾಗುವಾಗ ಮಾನವನ ಆಯಸ್ಸಿನ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ದಕ್ಷಿಣಕೊರಿಯದಲ್ಲಿ 2030ಕ್ಕಾಗುವಾಗ ಸರಾಸರಿ ಆಯಸ್ಸಿನ ಮಿತಿ 90ವರ್ಷಆಗಲಿದೆ. ಇಲ್ಲಿ2030ರಲ್ಲಿ ಹುಟ್ಟುವ ಹೆಣ್ಣುಮಗು 90.8 ವರ್ಷಗಳವರೆಗೆ ಬದುಕಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಗಂಡುಮಕ್ಕಳ ಆಯಸ್ಸುಮಿತಿ 84.1 ವರ್ಷ ಆಗಿದೆ. 2030ಕ್ಕಾಗುವಾಗ ದಕ್ಷಿಣ ಕೊರಿಯದಲ್ಲಿ 65ವರ್ಷ ಪ್ರಾಯವಾಗಿರುವವರಿಗೆ 27.5 ವರ್ಷಹೆಚ್ಚು ಆಯಸ್ಸು ದೊರಕಲಿದೆ. ಎಳೆವೆಯಲ್ಲಿ ಸಿಕ್ಕಿದ ಉತ್ತಮ ಪೋಷಕಾಹಾರ, ಕಡಿಮೆ ರಕ್ತದೊತ್ತಡ, ಕಡಿಮೆ ಧೂಮಪಾನ, ಆರೋಗ್ಯಸಂರಕ್ಷಣೆ ಆಯಸ್ಸು ಮಿತಿಯಲ್ಲಿ ಹೆಚ್ಚಳವಾಗಲು ಕಾರಣವಾಗಿದೆ ಎಂದು ಇಂಪೀರಿಯಲ್ ಕಾಲೇಜ್ ಲಂಡನ್‌ನ ಪ್ರಾಧ್ಯಾಪಕ ಮಜೀದ್ ಅಸ್ಸಾದಿ ಹೇಳಿದ್ದಾರೆಂದು ಲಾನ್ಸಂಟ್ ಜರ್ನಲ್‌ನಲ್ಲಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News