×
Ad

ಫೆ.28: ಟೈಲರ್ಸ್‌ನಿಂದ ಬೆಂಗಳೂರು ಚಲೋ

Update: 2017-02-23 16:31 IST

ಮಂಗಳೂರು, ಫೆ.23: ಹೊಲಿಗೆ ಕೆಲಸಗಾರರಿಗೆ ಭವಿಷ್ಯನಿಧಿ ಯೋಜನೆಯನ್ನು ಜಾರಿಗೊಳಿಸಬೇಕು ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಟೈಲರ್ಸ್‌ ಅಸೋಸಿಯೇಶನ್ ವತಿಯಿಂದ ಫೆ.28ರಂದು ಬೆಂಗಳೂರು ಚಲೋ ನಡೆಯಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್‌ನ ದ.ಕ. ಜಿಲ್ಲಾಧ್ಯಕ್ಷ ಉದಯ ಕುಮಾರ್ ಕೋಡಿಕಲ್, ಬೆಳಗ್ಗೆ 10 ಗಂಟೆಗೆ ಬೆಂಗಳೂರು ಕೆಎಸ್ಸಾರ್ಟಿಸಿ ಸಿಟಿ ರೈಲ್ವೇ ಸ್ಟೇಶನ್ ಬಳಿಯಿಂದ ಫ್ರೀಡಂ ಪಾರ್ಕ್ ತನಕ ಮೆರವಣಿಗೆ ಸಾಗಿ ಅನಂತರ ಪ್ರತಿಭಟನಾ ಸಭೆ ನಡೆಯಲಿದೆ. 30 ಜಿಲ್ಲೆಗಳಿಂದ ಎಲ್ಲಾ ಟೈಲರ್ ವೃತ್ತಿಯವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬೋರ್ಡ್ ಮೀಟಿಂಗ್‌ನಲ್ಲಿ ಜಾರಿಯಾಗಿ ಈ ತನಕ ಅನುಷ್ಠಾನ ಆಗದಿರುವ ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್‌ನ್ನು ಶೀಘ್ರ ಜಾರಿಗೊಳಿಸಬೇಕು. ಈವರೆಗೆ ಹಣ ಸಂದಾಯ ಮಾಡಿದ 60 ವರ್ಷ ತುಂಬಿದ ಎಲ್ಲ ಎನ್‌ಪಿಎಸ್ ಲೈಟ್ ಲಾನುಭವಿಗಳಿಗೆ ನಿವೃತ್ತಿ ಘೋಷಣೆ ಮಾಡಬೇಕು ಮತ್ತು ಅವರಿಗೆ ನಿವೃತ್ತಿ ವೇತನ ನೀಡಲು ವ್ಯವಸ್ಥೆ ಮಾಡಬೇಕು, ಹೊಲಿಗೆ ಕೆಲಸಗಾರರ ಹೆಣ್ಣು ಮಕ್ಕಳಿಗೆ ವಿವಾಹಧನ ಕೊಡ ಮಾಡುವ ವ್ಯವಸ್ಥೆಯನ್ನು ಈ ಮಂಡಳಿ ಮೂಲಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಪದಾಧಿಕಾರಿಗಳಾದ ವಿಶ್ವನಾಥ್ ಬಜಾಲ್, ಜಯರಾಜ್ ಕೋಟ್ಯಾನ್, ಸುಜಾತಾ ಜೋಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News