ಕಾಸರಗೋಡು: ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಅಟೋ ಚಾಲಕನ ಬಂಧನ
Update: 2017-02-23 17:19 IST
ಕಾಸರಗೋಡು, ಫೆ.23: ಶಾಲಾ ವಿದ್ಯಾರ್ಥಿಗೆ ಕಿರುಕುಳಕ್ಕೆ ಯತ್ನಿಸಿದ ಘಟನೆ ಆದೂರಿನಲ್ಲಿ ನಡೆದಿದ್ದು , ಆಟೋ ಚಾಲಕನೋರ್ವನನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ನಾಟೆಕಲ್ ನ ಆಟೋ ಚಾಲಕ, ಕಾಪಿಕಾಡ್ ನ ದಿನೇಶ್ ( 27) ಎಂದು ಗುರುತಿಸಲಾಗಿದೆ.
ದಿನಂಪ್ರತಿ ಶಾಲಾ ಮಕ್ಕಳನ್ನು ಈತನ ಆಟೋದಲ್ಲಿ ಕರೆದೊಯ್ಯಲಾಗಿತ್ತು. ಬುಧವಾರ ಸಂಜೆ ಉಳಿದ ಮಕ್ಕಳನ್ನು ಬಿಟ್ಟು ಮೂರನೇ ತರಗತಿಯ ವಿದ್ಯಾರ್ಥಿನಿ ಮಾತ್ರ ಆಟೋದಲ್ಲಿದ್ದಳು. ಈಕೆಯನ್ನು ಮನೆಗೆ ಕೊಂಡೊಯ್ಯುವ ದಾರಿ ಮಧ್ಯೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಿರುಕುಳಕ್ಕೆ ಯತ್ನಿಸಿದ್ದಾನೆ.
ಅಲ್ಲಿಂದ ತಪ್ಪಿಸಿಕೊಂಡು ಬಂದ ವಿದ್ಯಾರ್ಥಿನಿ ಸಮೀಪದ ಮನೆಯವರಿಗೆ ಮಾಹಿತಿ ನೀಡಿದ್ದು , ಬಳಿಕ ಆದೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ನಾಗರಿಕರು ದಿನೇಶ್ ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.