×
Ad

ಉಳ್ಳಾಲ: ಫೆ.25ರ ದ.ಕ ಜಿಲ್ಲಾ ಬಂದ್‌ಗೆ ಉಳ್ಳಾಲ ಬಿಜೆಪಿ ಬೆಂಬಲ

Update: 2017-02-23 17:39 IST

ಕೊಣಾಜೆ, ಫೆ.23: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಮಂಗಳೂರು ಭೇಟಿಗೆ ಬಿಜೆಪಿ ಮಂಗಳೂರು ವಿದಾನಸಭಾ ಕ್ಷೇತ್ರವು ಸಂಪೂರ್ಣ ವಿರೋಧ ವ್ಯಕ್ತ ಪಡಿಸಿದೆ.

ಸಿಪಿಐಎಂ ಜಿಲ್ಲಾ ಸಮಿತಿಯು ಫೆ.25ರಂದು ಜಿಲ್ಲೆಯಲ್ಲಿ ಸೌಹಾರ್ದ ರ‍್ಯಾಲಿ ಹಮ್ಮಿಕೊಂಡಿದ್ದು ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸುತ್ತಿದ್ದು, ಪಿಣರಾಯಿ ಆಗಮನವನ್ನು ವಿರೋಧಿಸಿ ಸಂಘ ಪರಿವಾರದ ವೇದಿಕೆಯಿಂದ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದ್ದು, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರವು ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕ್ಷೇತ್ರಾಧ್ಯಕ್ಷ ಸಂತೋಷ್ ಬೋಳಿಯಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News