ಲಾಹೋರ್‌ನಲ್ಲಿ ಅವಳಿ ಸ್ಫೋಟ: ಕನಿಷ್ಠ 7 ಸಾವು

Update: 2017-02-23 15:14 GMT

ಲಾಹೋರ್, ಫೆ. 23: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಾಂಬ್ ಸ್ಫೋಟಗಳ ಸರಣಿ ಮುಂದುವರಿದಿದ್ದು, ಗುರುವಾರ ಆ ದೇಶದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ.

ಮೊದಲ ಸ್ಫೋಟವು ಲಾಹೋರ್‌ನ ವಾಣಿಜ್ಯ ಸ್ಥಳವೊಂದರ ಕಟ್ಟಡದಲ್ಲಿ ಸಂಭವಿಸಿದ್ದು ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ

ಆರಂಭದಲ್ಲಿ, ಜನರೇಟರೊಂದು ಸ್ಫೋಟಿಸಿದೆ ಎಂಬುದಾಗಿ ಪಾಕಿಸ್ತಾನದ ಟೆಲಿವಿಶನ್ ಚಾನೆಲ್ ‘ಜಿಯೋ ನ್ಯೂಸ್’ ವರದಿ ಮಾಡಿತ್ತು. ಆದರೆ, ಹಾನಿಯ ತೀವ್ರತೆಯನ್ನು ಪರಿಗಣಿಸಿದ ಬಳಿಕ ಅದು ಬಾಂಬ್ ಸ್ಫೋಟವೆನ್ನುವುದು ಖಚಿತವಾಯಿತು.

ಎರಡನೆ ಸ್ಫೋಟ

ಲಾಹೋರ್ ನಗರದ ಇನ್ನೊಂದು ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಇನ್ನೊಂದು ಪ್ರಬಲ ಸ್ಫೋಟ ಸಂಭವಿಸಿತು ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದರು.
ಮೊದಲ ಸ್ಫೋಟ ನಡೆದ ಗಂಟೆಗಳ ಬಳಿಕ ಈ ಸ್ಫೋಟ ಸಂಭವಿಸಿದೆ. ಎರಡನೆ ಸ್ಫೋಟದ ಸಾವು ನೋವಿನ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಇತ್ತೀಚಿನ ವಾರಗಳಲ್ಲಿ ಪಾಕಿಸ್ತಾನದಾದ್ಯಂತ ನಿರಂತರ ಬಾಂಬ್ ಸ್ಫೋಟಗಳು ಸಂಭವಿಸುತ್ತಿದ್ದು, ಕನಿಷ್ಠ 130 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News