ಹಿಜಾಬ್ ತೆಗೆಯಲು ಬಲವಂತಪಡಿಸಿದ ನ್ಯೂಯಾರ್ಕ್ ಪೊಲೀಸರು :ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆ

Update: 2017-02-23 15:57 GMT

ನ್ಯೂಯಾರ್ಕ್, ಫೆ. 23: ತನ್ನನ್ನು ಅಕ್ರಮವಾಗಿ ಬಂಧಿಸಿದ ಬಳಿಕ ಪೊಲೀಸ್ ಅಧಿಕಾರಿಗಳು ತನ್ನ ಹಿಜಾಬನ್ನು ಬಲವಂತವಾಗಿ ತೆಗೆಸಿ ತನ್ನ ಚಿತ್ರಗಳನ್ನು ತೆಗೆದಿದ್ದಾರೆ ಎಂದು ಆರೋಪಿಸಿ ಮುಸ್ಲಿಮ್ ಮಹಿಳೆಯೊಬ್ಬರು ಇಲ್ಲಿನ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ತಾನು ಮಿಡ್‌ಟೌನ್‌ನಲ್ಲಿರುವ ಸ್ಟಾರ್‌ಬಕ್ಸ್ ಕಾಫಿ ಅಂಗಡಿಯಿಂದ ಹೊರಬರುತ್ತಿದ್ದಾಗ ಪೊಲೀಸರು ತನ್ನನ್ನು ಅಕ್ರಮವಾಗಿ ಬಂಧಿಸಿದರು ಎಂದು 34 ವರ್ಷದ ರಬಾಬ್ ಮೂಸ ಮ್ಯಾನ್‌ಹಟನ್ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ.

ಮಿಡ್‌ಟೌನ್ ಪೊಲೀಸ್ ಠಾಣೆಯೊಂದಕ್ಕೆ ತನ್ನನ್ನು ಕರೆದುಕೊಂಡು ಹೋದ ಪೊಲೀಸರು, ತನ್ನ ಹಿಜಾಬ್ ತೆಗೆಯುವಂತೆ ಆದೇಶ ನೀಡಿ ತನ್ನ ಫೋಟೊಗಳನ್ನು ತೆಗೆದರು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ ಎಂದು ‘ನ್ಯೂಯಾರ್ಕ್ ಡೇಲಿ ನ್ಯೂಸ್’ ವರದಿ ಮಾಡಿದೆ.

ಪೊಲೀಸರು ತನ್ನನ್ನು ಪುರುಷರಿರುವ ಸೆಲ್‌ನಲ್ಲಿ ಇಟ್ಟರು ಎಂದು ಆರೋಪಿಸಿದ್ದಾರೆ.

‘ನೀವು ಮಾಡಿರುವ ಅಪರಾಧವನ್ನು ಒಪ್ಪಿಕೊಳ್ಳಿ’ ಎಂಬುದಾಗಿ ಪೊಲೀಸರು ತನ್ನನು ಒತ್ತಾಯಿಸಿದರು ಎಂದರು.

ಆದರೆ, ಆರು ಗಂಟೆಗಳ ಬಳಿಕ ತನ್ನ ವಿರುದ್ಧ ಯಾವುದೇ ಆರೋಪ ಹೊರಿಸದೆ ಪೊಲೀಸರು ಬಿಡುಗಡೆಗೊಳಿಸಿದರು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News