ಮುಸ್ಲಿಮ್ ಪ್ರವೇಶ ನಿಷೇಧ: ಹೊಸ ಆದೇಶ ಮುಂದಿನ ವಾರ : ಶ್ವೇತಭವನ

Update: 2017-02-23 16:02 GMT

ವಾಶಿಂಗ್ಟನ್, ಫೆ. 23: ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುವ ತನ್ನ ಮೂಲ ಆದೇಶದ ಸ್ಥಾನದಲ್ಲಿ ತರಲು ಉದ್ದೇಶಿಸಿರುವ ಇನ್ನೊಂದು ಆದೇಶವನ್ನು ಮುಂದೂಡಲು ಶ್ವೇತಭವನ ನಿರ್ಧರಿಸಿದೆ

ಮುಂದಿನ ವಾರ ಆದೇಶವನ್ನು ಹೊರಡಿಸುವ ನಿರೀಕ್ಷೆಯಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.

ನೂತನ ಆದೇಶವನ್ನು ಈ ವಾರ ಹೊರಡಿಸುವ ನಿರೀಕ್ಷೆಯಿದೆ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮೊದಲು ಹೇಳಿದ್ದರು.

ಜನವರಿ 27ರಂದು ಹೊರಡಿಸಲಾದ ಮೂಲ ಆದೇಶಗಳ ಬಗ್ಗೆ ವಾಶಿಂಗ್ಟನ್ ರಾಜ್ಯ ಮತ್ತು ಸ್ಯಾನ್‌ಫ್ರಾನ್ಸಿಸ್ಕೊಗಳಲ್ಲಿ ವ್ಯಕ್ತವಾದ ಕಾನೂನು ಬಿಕ್ಕಟ್ಟನ್ನು ನೂತನ ಆದೇಶವು ನಿವಾರಿಸುತ್ತದೆ ಎಂದು ಟ್ರಂಪ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News