ಪಡಿತರದ ಗೋಧಿಯಲ್ಲಿ ಹುಳ ಪತ್ತೆ: ಕಂದಾಯ ಇಲಾಖೆಗೆ ದೂರು

Update: 2017-02-23 18:37 GMT

ಪುತ್ತೂರು, ೆ.23: ಪುತ್ತೂರು ನಗರದ ಹೊರವಲಯದ ಸರಕಾರಿ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ಚೀಟಿ ದಾರ ಗ್ರಾಹಕರೊಬ್ಬರಿಗೆ ಶುಕ್ರವಾರ ಹುಳ ತುಂಬಿಕೊಂಡಿರುವ ಕಳಪೆ ಮಟ್ಟದ ಗೋಧಿಯನ್ನು ವಿತರಿಸಲಾಗಿದೆ ಎಂದು ಆರೋಪಿಸಿ, ಅವರು ಗೋಧಿ ಸಹಿತ ಕಂದಾಯ ಇಲಾಖೆಯ ಆಹಾರ ಸರಬರಾಜು ವಿಭಾಗದ ಅಕಾರಿಗಳಿಗೆ ದೂರು ನೀಡಿದ್ದಾರೆೆ. ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆಯಲ್ಲಿರುವ ಟಿಎಪಿಸಿಎಂಎಸ್ ಸರಕಾರಿ ನ್ಯಾಯ ಬೆಲೆ ಅಂಗಡಿಯಿಂದ ಗುರುವಾರ ಪಡಿತರ ಚೀಟಿದಾರ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಕುಡ್ವಾಸ್ ಕಾಂಪೌಂಡ್‌ನ ನಿವಾಸಿ ಗಣೇಶ್ ಹೆಗ್ಡೆ 125 ರೂ. ನೀಡಿ 5 ಕೆ.ಜಿ. ಅಕ್ಕಿ ಮತ್ತು 5 ಕೆ.ಜಿ. ಗೋಯನ್ನು ಖರೀದಿಸಿದ್ದರು ಎನ್ನಲಾಗಿದೆ. ಅವರಿಗೆ ವಿತರಿಸಲಾಗಿದ್ದ ಪಡಿತರ ಆಹಾರಗಳ ಪೈಕಿ ಗೋಯಲ್ಲಿ ಹುಳಗಳೇ ತುಂಬಿ ತೀರಾ ಕಳಪೆ ಮಟ್ಟದ್ದಾಗಿದೆ ಎಂದು ಅವರು ದೂರಿದ್ದಾರೆ.

ಈ ಹಿನ್ನೆಲೆ ಯಲ್ಲಿ ಗಣೇಶ್ ಹೆಗ್ಡೆ ಗೋಯನ್ನು ನೇರವಾಗಿ ಪುತ್ತೂರಿನ ಮಿನಿವಿಧಾನ ಸೌಧಕ್ಕೆ ತಂದು, ಕಂದಾಯ ಇಲಾಖೆಯ ಆಹಾರ ಸರಬರಾಜು ಇಲಾಖೆಯ ಅಕಾರಿಗಳ ಗಮನಕ್ಕೆ ತಂದಿದ್ದಾರೆ. ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಿಸಲಾಗಿದ್ದ ಗೋಯನ್ನು ಪರಿಶೀಲಿಸಿ ಕಳಪೆ ಮಟ್ಟದ್ದಾಗಿದೆ ಎಂದು ಖಚಿತಪಡಿಸಿಕೊಂಡ ಆಹಾರ ವಿಭಾಗದ ಅಕಾರಿಗಳು ಆ ಗೋಯನ್ನು ನ್ಯಾಯಬೆಲೆ ಅಂಗಡಿಗೆ ಹಿಂದಿರುಗಿಸುವಂತೆ ಗಣೇಶ್ ಹೆಗ್ಡೆ ಅವರಿಗೆ ತಿಳಿಸಿದ್ದಾರೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಉಳಿಕೆಯಾಗಿಕೊಂಡು ಬರುವ ಆಹಾರ ಸಾಮಗ್ರಿಗಳನ್ನು ಹಾಗೆಯೇ ದಾಸ್ತಾನು ಇರಿಸಲಾಗುತ್ತಿದೆ. ಇದರಿಂದಾಗಿ ಆಹಾರ ಸಾಮಗ್ರಿ ಗಳಲ್ಲಿ ಹುಳ ತುಂಬಿಕೊಂಡು ಕಳಪೆಯಾಗುತ್ತಿದೆ. ಆದರೂ ಸಂಬಂಧಪಟ್ಟ ನ್ಯಾಯ ಬೆಲೆ ಅಂಗಡಿಯವರು ಅದನ್ನು ಹಿಂದಿರುಗಿಸದೆ, ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಗ್ರಾಹಕರಿಗೆ ವಿತರಿಸುವ ಮೂಲಕ ದಾಸ್ತಾನು ಖಾಲಿ ಮಾಡುತ್ತಿದ್ದಾರೆ ಎಂದು ಗಣೇಶ್ ಹೆಗ್ಡೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News