‘ನವಜಾತ ಶಿಶು ಮರಣ ಪ್ರಮಾಣ ಇಳಿಕೆ’

Update: 2017-02-23 18:43 GMT

ಮೂಡುಬಿದಿರೆ, ೆ.23: ಭಾರತ ದೇಶವು ಾರ್ಮಸಿಟಿಕಲ್ ಉತ್ಪನ್ನಗಳ ರಫ್ತಿನಲ್ಲಿ 4ನೆ ಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಾಗುತ್ತಿರುವ ಪರಿಣಾಮಕಾರಿ ಬೆಳವಣಿಗೆಯಿಂದ ನವಜಾತ ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ ಮಾನವನ ಜೀವಿತಾವ ವೃದ್ಧಿಸಲು ಕಾರಣವಾಗಿದೆ ಎಂದು ಬೆಂಗಳೂರಿನ ಹಿಮಾಲಯ ಡ್ರಗ್ ಕಂಪೆನಿಯ ಹಿರಿಯ ಸಂಶೋಧನಾ ವಿದ್ವಾಂಸ ಡಾ.ಹರಿಪ್ರಸಾದ್ ಹೇಳಿದರು. ಔಷಯ ಅನ್ವೇಷಣೆ, ವಿನ್ಯಾಸ, ಅಭಿವೃದ್ಧಿ ಕುರಿತು ಆಳ್ವಾಸ್ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭಾರತದಲ್ಲಿರುವ ಪಾರಂಪರಿಕ ಔಷಗಳ ತಯಾರಿಕೆಯಲ್ಲಿನ ಕೌಶಲ್ಯಗಳು ಾರ್ಮಸಿಟಿಕಲ್ ಕ್ಷೇತ್ರದಲ್ಲಿನ ಅನ್ವೇಷಣೆಗಳಿಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಾರ್ಮಸಿಟಿಕಲ್‌ನ ಜ್ಞಾನವನ್ನು ಹೆಚ್ಚಿಸಿಕೊಂಡು ಸಂಶೋಧನೆಯಲ್ಲಿ ತೊಡಗಿಸಿಕೊಂಡರೆ ಮುಂದೆ ಈ ಕ್ಷೇತ್ರವನ್ನು ಯಶಸ್ವಿಯಾಗಿ ಮುನ್ನಡೆಸಬಹುದು ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಕಾರಿ ರಾಜಶೇಖರ ಪುರಾಣಿಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಔಷ ತಯಾರಿಕಾ ಘಟಕಗಳು ಪರಿಸರ ಹಾಗೂ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯಾಚರಿಸುವುದು ಅಗತ್ಯ. ಔಷ ತಯಾರಿಕೆ ಸಂದರ್ಭ ಹೊರಬರುವ ತ್ಯಾಜ್ಯವನ್ನು ಸರಿಯಾದ ರೀತಿ ನಿರ್ವಹಣೆ ಮಾಡುವುದರಿಂದ ಪರಿಸರ ಮೇಲಾಗುವ ದುಷ್ಪರಿಣಾಮವನ್ನು ತಡೆಯಬಹುದು ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಔಷ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆ ವಿನಃ, ಅದರಿಂದಾಗುವ ಅಡ್ಡಪರಿಣಾಮಗಳು ಜೀವನ ಪದ್ಧತಿಯನ್ನು ಮಾರಕವಾಗಬಾರದು. ಔಷ ಕಂಪೆನಿಗಳ ತಮ್ಮ ಸ್ವಾರ್ಥದ ಬಗ್ಗೆ ಯೋಚಿಸದೆ, ಮಾನವೀಯತೆ ನೆಲೆಯಲ್ಲಿ ಅದನ್ನು ಪಡೆದುಕೊಳ್ಳುವವರ ಜೀವನ ಕುರಿತು ಚಿಂತನೆ ನಡೆಸಬೇಕಿದೆ ಎಂದರು.

ಇದೇ ಸಂದರ್ಭ ವಿಚಾರಸಂಕಿರಣದ ವಿಚಾರಧಾರೆಗಳ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಸಹಾಯಕ ಪ್ರಾಧ್ಯಾಪಕಿ ಜೆನಿಟಾ ಉಪಸ್ಥಿತರಿದ್ದರು.

ಆಳ್ವಾಸ್ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ರಾಮ ಭಟ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಿಶಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News