ಯುವ ಸಮುದಾಯ ಸಮಾಜದ ಸಂಪತ್ತಾಗಲಿ: ಎಸ್ಪಿ ಬೊರಸೆ

Update: 2017-02-23 18:45 GMT

ಕೊಣಾಜೆ, ೆ.23: ಯುವಕರಲ್ಲಿ ಕೇವಲ ಮೋಜಿಗಾಗಿ ಆರಂಭಗೊಳ್ಳುವ ಮಾದಕ ವ್ಯಸನವು ಬಳಿಕ ಒಂದು ಚಟವಾಗಿ ಅವರ ಜೀವನದ ಸರ್ವನಾಶಕ್ಕೆ ಕಾರಣವಾಗುತ್ತದೆ. ಯುವ ಸಮುದಾಯವು ಕುಡಿತ, ಸಿಗರೇಟ್ ಸೇವನೆ ಸೇರಿದಂತೆ ವಿವಿಧ ಮಾದಕ ವ್ಯಸನಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸವನ್ನು ಬೆಳೆಸಿಕೊಂಡು ಸಮಾಜದ ಸಂಪತ್ತಾಗಿ ರೂಪುಗೊಳ್ಳಬೇಕು ಎಂದು ದ.ಕ. ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ಹೇಳಿದರು.

ಯೆನೆಪೊಯ ವಿಶ್ವವಿದ್ಯಾನಿಲಯದ ಯೆನೆಪೊಯ ನ್ಯಾರೋಟಿಕ್ಸ್ ಎಜುಕೇಶನಲ್ ೌಂಡೇಶನ್ ಆ್ ಇಂಡಿಯಾ ಇದರ ಆಶ್ರಯದಲ್ಲಿ ರೋಟರಿ ಕ್ಲಬ್ ಮಂಗಳೂರು, ಹಿಲ್‌ಸೈಡ್ ನಂ.2181, ಮಲಬಾರ್ ಗೋಲ್ಡ್, ಜೆಟ್ ಏರ್‌ವೇಸ್ ಹಾಗೂ ಕಾರ್ಪೊರೇಶನ್ ಬ್ಯಾಂಕ್‌ನ ಸಹಯೋಗದಲ್ಲಿ ಗುರುವಾರ ಯೆನೆಪೊಯ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಮಾದಕ ವ್ಯಸನ ಸಮಸ್ಯೆ ಪರಿಹಾರಕ್ಕಾಗಿ ನಡೆದ ‘ಮಿಶನ್ ಏಂಜಲ್ ಟ್ರಸ್ಟ್’ ರ್ಯಾಲಿ ಉದ್ಘಾಟನೆ ಹಾಗೂ ದ.ಕ., ಉಡುಪಿ ಕಾಸರಗೋಡು ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು

ಮಂಗಳೂರಿನಲ್ಲಿ ಮಾದಕ ವ್ಯಸನಗಳ ಕಡಿವಾಣಕ್ಕೆ ಹಲವಾರು ಕಾನೂನು ರೀತಿಯ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೆ, ಇಂತಹ ಶೈಕ್ಷಣಿಕ ಸಂಸ್ಥೆಗಳ ಮೂಲಕ ನಡೆಯುವ ಜಾಗೃತಿ ಅಭಿಯಾನವು ಕೂಡಾ ಪರಿಣಾಮಕಾರಿಯಾಗಬಲ್ಲುದು. ಅದಕ್ಕಿಂತಲೂ ಮುಖ್ಯವಾಗಿ ವಿದ್ಯಾರ್ಥಿಗಳು, ಯುವ ಪೀಳಿಗೆ ಸ್ವಪ್ರೇರಣೆಯಿಂದ ಮಾದಕ ದ್ರವ್ಯಗಳ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ಎ.ಎಂ.ನರಹರಿ, ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳು ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಉತ್ತಮ ರ್ಯಾಂಕ್‌ಗಳಿಸಿದರಷ್ಟೇ ಸಾಕು ಎಂದು ಹಂಬಲಿಸುವವರಿದ್ದಾರೆ. ಆದರೆ ರ್ಯಾಂಕ್‌ಗಳಿಂದ ಮುಖ್ಯವಾಗಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪ್ರಾಮಾಣಿಕತೆ, ಮಾನವೀಯತೆಯ ವೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದವರು ನುಡಿದರು. ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಪತಿ ಪ್ರೊ.ಯೆನೆಪೊಯ ಅಬ್ದುಲ್ಲಾ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೆನೆಪೊಯ ವಿವಿಯ ಕುಲಸಚಿವ ಡಾ.ಜಿ.ಶ್ರೀಕುಮಾರ್ ಮೆನನ್ ಸ್ವಾಗತಿಸಿದರು. ಯೆನೆಪೊಯ ವಿವಿಯ ಪ್ರಾಧ್ಯಾಪಕ ಡಾ.ಶೆಮ್ಜಾಝ್ ಅರಕ್ಕಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News