ಕೊಹ್ಲಿ ಶೂನ್ಯ ; ಭಾರತ ಆರಂಭಿಕ ಕುಸಿತ, ರಾಹುಲ್ ಅರ್ಧಶತಕ

Update: 2017-02-24 08:53 GMT

 ಪುಣೆ, ಫೆ.24: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಟೆಸ್ಟ್‌ ನಲ್ಲಿ ಭಾರತ ಮೊದಲ ಇನಿಂಗ್ಸ್‌ ನಲ್ಲಿ ಆರಂಭಿಕ ಕುಸಿತ ಕಂಡಿದ್ದು, ನಾಯಕ ವಿರಾಟ್‌ ಕೊಹ್ಲಿ ಸೊನ್ನೆ ಸುತ್ತಿದ್ದಾರೆ. ರಾಹುಲ್ ಅರ್ಧಶತಕ ದಾಖಲಿಸಿದ್ದಾರೆ.
ಆಸ್ಟ್ರೇಲಿಯವನ್ನು ಮೊದಲ ಇನಿಂಗ್ಸ್‌ನಲ್ಲಿ 94.5 ಓವರ‍್ ಗಳಲ್ಲಿ 260ಕ್ಕೆ ನಿಯಂತ್ರಿಸಿದ ಭಾರತ  ಮೊದಲ ಇನಿಂಗ್ಸ್‌ನಲ್ಲಿ 32 ಓವರ್‌ಗಳಲ್ಲಿ 3ವಿಕೆಟ್‌ ನಷ್ಟದಲ್ಲಿ 94 ರನ್‌ ಗಳಿಸಿದೆ.
ಮುರಳಿ ವಿಜಯ್‌(10), ಚೇತೇಶ್ವರ ಪೂಜಾರ (6) ಮತ್ತು ವಿರಾಟ್‌ ಕೊಹ್ಲಿ(೦) ಅವರು ಹೇಝಲ್‌ವುಡ್‌ (11ಕ್ಕೆ 1) ಮತ್ತು ಮಿಷೆಲ್‌ ಸ್ಟಾರ್ಕ್‌(22ಕ್ಕೆ 2) ದಾಳಿಗೆ ಸಿಲುಕಿ ಬೇಗನೆ ಔಟಾಗಿದ್ದಾರೆ.ಆರಂಭಿಕ ದಾಂಡಿಗಲೋಕೇಶ್‌ ರಾಹುಲ್‌(ಔಟಾಗದೆ 64) ಮತ್ತು ಅಜಿಂಕ್ಯ ರಹಾನೆ( ಔಟಾಗದೆ 13) ಕ್ರೀಸ್ ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News