ವಿಟ್ಲ: ಗುಡ್ಡಕ್ಕೆ ಶಾರ್ಟ್ ಸರ್ಕಿಟ್ ನಿಂದ ಬೆಂಕಿ
Update: 2017-02-24 16:37 IST
ವಿಟ್ಲ. ಫೆ.24: ವಿಟ್ಲದ ಒಕ್ಕೆತ್ತೂರು ಸಮೀಪ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡು ಅಪಾರ ನಷ್ಟ ಸಂಭವಿಸಿದೆ.
ಶಾರ್ಟ್ ಸರ್ಕಿಟ್ ನಿಂದ ಬೆಂಕಿ ತಗಲಿದ್ದು ಎಂದು ಹೇಳಲಾಗಿದೆ.
ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಸುಮಾರು 5 ಎಕರೆಯಷ್ಟು ಜಾಗದಲ್ಲಿದ್ದ ಮರಗಳು ಬೆಂಕಿಗಾಹುತಿ ಎಂದು ತಿಳಿದು ಬಂದಿದೆ.