ಮಂಗಳೂರು ಜಿಲ್ಲೆಯಲ್ಲಿ ಕಣ್ಣೂರು ಮಾದರಿ ಸಂಘರ್ಷಕ್ಕೆ ಸಂಘ ಪರಿವಾರ ಸಂಚು: ಸಿಪಿಐ ಆರೋಪ
Update: 2017-02-24 18:15 IST
ಮಂಗಳೂರು, ಫೆ.24: ಕೇರಳದಲ್ಲಿ ಜಾತಿ-ಧರ್ಮದ ವಿಚಾರದಲ್ಲಿ ಅಮಾಯಕರನ್ನು ಕೊಲ್ಲುತ್ತಾ ಕೊಲೆ ರಾಜಕೀಯ ಮಾಡುತ್ತಿರುವ ಸಂಘ ಪರಿವಾರ ಸಂಘಟನೆಗಳು ಇದೀಗ ಕರಾವಳಿ ಜಿಲ್ಲೆಗಳನ್ನು ಕೇಂದ್ರೀಕರಿಸಿ ಕೇರಳದ ಕಣ್ಣೂರು ಮಾದರಿಯಲ್ಲಿ ಸಂಘರ್ಷ ಸೃಷ್ಟಿಸಿ ಜಿಲ್ಲೆಯ ಕೋಮು ಸೌಹಾರ್ದವನ್ನು ಛಿದ್ರ ಮಾಡಲು ಸಂಚು ರೂಪಿಸಿವೆ ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಆರೋಪಿಸಿದೆ.
ಮಂಗಳೂರಿಗೆ ಬೆಂಕಿ ಹಚ್ಚಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಈಗಾಗಲೆ ಬಹಿರಂಗವಾಗಿ ಘೋಷಿಸಿರುತ್ತಾರೆ. ಇಂತಹ ಸಂಘರ್ಷಕ್ಕೆ ಕಾರಣರಾಗುತ್ತಿರುವ ಸಂಸದರನ್ನು ಹಾಗೂ ಇತರ ಸಂಘ ಪರಿವಾರದ ನಾಯಕರನ್ನು ಜೈಲಿಗಟ್ಟಬೇಕು ಎಂದು ಸಿಪಿಐ ಒತ್ತಾಯಿಸಿದೆ.
ಕಿಡಿಗೇಡಿಗಳಿಂದ ಬೆಂಕಿ ಹಚ್ಚಲ್ಪಟ್ಟ ಸಿಪಿಎಂ ಉಳ್ಳಾಲ ವಲಯ ಕಚೇರಿಗೆ ಸಿಪಿಐ ನಿಯೋಗ ಭೇಟಿ ನೀಡಿದ್ದು, ಇದರಲ್ಲಿ ವಿ.ಕುಕ್ಯಾನ್, ವಿ.ಎಸ್. ಬೇರಿಂಜ, ಎಂ. ಕರುಣಾಕರ್ ಮುಂತಾದವರಿದ್ದರು.