×
Ad

ನೀರಿನ ಸಮಸ್ಯೆಗೆ ಪರಿಹಾರ: ಸಲಹೆ ನೀಡಲು ಆಹ್ವಾನ

Update: 2017-02-24 19:41 IST

ಮಂಗಳೂರು, ಫೆ.24: ದ.ಕ.ಜಿಲ್ಲೆಯಲ್ಲಿ ಎದುರಾಗುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಜಿಲ್ಲೆಯ ನಾಗರಿಕರು ಸಲಹೆಗಳನ್ನು ನೀಡಬಹುದು. ಇದನ್ನು ಕ್ರೋಢೀಕರಿಸಿ ಶಾಶ್ವತ ಯೋಜನೆಗಳನ್ನು ರೂಪಿಸಲು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜನಾಂದೋಲನಗಳ ಮಹಾಮೈತ್ರಿ ದ.ಕ.ಜಿಲ್ಲಾ ಪ್ರಮುಖರು ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಹಾಮೈತ್ರಿಯ ಮುಖಂಡ ರವಿಕಿರಣ್ ಪುಣಚ ಕಳೆದ ವರ್ಷ ಮೈಸೂರನಲ್ಲಿ ನಡೆದ ಸಮಾವೇಶದಲ್ಲಿ ಱಜನಾಂದೋಲನಗಳ ಮಹಾಮೈತ್ರಿೞಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ರೂಪಿಸುವ ಬಗ್ಗೆ ಘೋಷಿಸಲಾಗಿದೆ. ಸ್ವಾತಂತ್ರ, ಸಮಾನತೆ, ನ್ಯಾಯದ ಪರಿಕಲ್ಪನೆಯ ಜೊತೆ ಕೆಲಸ ಮಾಡುವ ಎಲ್ಲ ಜೀವಪರ ಜನಚಳವಳಿಗಳ ರಾಜ್ಯ ಮಟ್ಟದ ಒಕ್ಕೂಟ ಇದಾಗಿದೆ. ದ.ಕ. ಜಿಲ್ಲಾ ಘಟಕದಲ್ಲಿ ಸುಮಾರು 10 ಸಂಘಟನೆಗಳು ಕೈಜೋಡಿಸಿದ್ದು, ಸದ್ಯ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತ ಯೋಜನೆಯನ್ನು ರೂಪಿಸುವ ಬಗ್ಗೆ ಚಿಂತನೆ ನಡೆಸಿದೆ.

ಆ ಹಿನ್ನ್ನೆಲೆಯಲ್ಲಿ ಸಲಹ ಸೂಚನೆಗಳನ್ನು ಅಂಚೆ ಅಥವಾ ಇಮೇಲ್ ಮೂಲಕ ಮಾ.10ರೊಳಗೆ ಹೆಸರು, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಜನಾಂದೋಲನಗಳ ಮಹಾಮೈತ್ರಿ, ಸಿ. 24, 2ನೆ ಮಹಡಿ, ಅಲ್‌ರಹಬಾ ಪ್ಲಾಝಾ, ನೆಲ್ಲಿಕಾಯಿ ರಸ್ತೆ, ಮಂಗಳೂರು-1 (waterforalldk@gmail.com)-9480279037- ಗೆ ಕಳುಹಿಸಬಹುದು.

ಸುದ್ದಿಗೋಷ್ಠಿಯಲ್ಲಿ ಸಿಟಿಝನ್ಸ್ ಫೋರಂ ಫಾರ್ ಮಂಗಳೂರು ಡೆವಲಪ್‌ಮೆಂಟ್‌ನ ವಿದ್ಯಾ ದಿನಕರ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಮರ್ ಯು.ಎಚ್., ದಸಂಸ ಮುಖಂಡ ನಿರ್ಮಲ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News