×
Ad

ಬೈಕ್ ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಬಸ್!

Update: 2017-02-24 20:28 IST

ಮುಂಡಗೋಡ, ಫೆ.24: ತಾಲೂಕಿನ ಸಿದ್ದನಕೊಪ್ಪ ಕ್ರಾಸ್ ಹತ್ತಿರ ಶುಕ್ರವಾರ ಬೈಕಿಗೆ ಬಸ್ಸೊಂದು ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರಿಗೆ ಗಂಭೀರ ಗಾಯವಾದರೆ ಇಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದೆ.

ಬೈಕ್ ಸವಾರರಾದ ಭೀಮಣ್ಣ ಬಾಬಣ್ಣನವರ, ಅಣ್ಣಪ್ಪ ಬಾಬಣ್ಣನವರ್, ಮತ್ತು ಬಸ್ ಚಾಲಕ ಮುಕ್ತಿಯಾರ ಅರವಿ, ನಿರ್ವಾಹಕಿ ಶಿಲ್ಪಾ ನೀರಲಗಿ, ಪ್ರಯಾಣಿಕ ಶಂಕರ ಶೇಟ, ಎಂಬಾತರ ುಗಾಯಗೊಂಡಿದ್ದಾರೆ.

ಕೆಎ. 29.ಎಪ್.840 ನಂಂಬರಿನ ಬಸ್ ಮುಂಡಗೋಡ ಕಡೆಯಿಂದ ಶಿರಶಿ ಕಡೆ ಅಸಾಗುವಾಗ,  ಶಿರಶಿ ಕಡೆಯಿಂದ ಮುಂಡಗೋಡ ಕಡೆ ಬರುತ್ತಿದ್ದ ಬೈಕಿಗೆ ಶಿರಶಿ ರಸ್ತೆಯ ಸಿದ್ದನಕೊಪ್ಪ ಕ್ರಾಸ ಹತ್ತಿರ ಡಿಕ್ಕಿ ಹೊಡೆದಿದೆ.  ಪರಿಣಾಮ ಬಸ್ ಪಲ್ಟಿಯಾಗಿದೆ.

ಬೈಕ ಸವಾರ ಮತ್ತು ಬಸ್ ಚಾಲಕನಿಗೆ ಗಂಭೀರ ಗಾಯವಾದರೆ,  ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳನ್ನು ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಗಂಭೀರ ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಕರೆದ್ಯೋಯಲಾಗಿದೆ.

ಅದೃಷ್ಟವಶಾತ್ ಬಸ್ನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.

ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ.ಬಸ್ ಚಾಲಕನ ವಿರುದ್ದ ಬೈಕ್ ಸವಾರ ಭೀಮಣ್ಣ ಇಲ್ಲಿನ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News