ಹಣ ದುರುಪಯೋಗ: ಮಾಜಿ ಐಎಂಎಫ್ ಮುಖ್ಯಸ್ಥನಿಗೆ ಜೈಲು

Update: 2017-02-24 15:12 GMT

ಮ್ಯಾಡ್ರಿಡ್, ಫೆ. 24: ಸ್ಪೇನ್‌ನ ಎರಡು ಬ್ಯಾಂಕ್‌ಗಳ ಮುಖ್ಯಸ್ಥನಾಗಿದ್ದಾಗ ಹಣ ದುರುಪಯೋಗ ನಡೆಸಿದ ಆರೋಪದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮಾಜಿ ಮುಖ್ಯಸ್ಥ ರಾಡ್ರಿಗೊ ರಟೊ ಅವರಿಗೆ ಗುರುವಾರ ನಾಲ್ಕು ವರ್ಷ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಕಜ ಮ್ಯಾಡ್ರಿಡ್ ಮತ್ತು ಬ್ಯಾಂಕಿಯ ಎಂಬ ಸ್ಪೇನ್‌ನ ಎರಡು ಬ್ಯಾಂಕ್‌ಗಳು ಬಿಕ್ಕಟ್ಟು ಎದುರಿಸುತ್ತಿದ್ದಾಗ ರಟೊ ಅವುಗಳ ಮುಖ್ಯಸ್ಥರಾಗಿದ್ದರು.

ಈ ಅವಧಿಯಲ್ಲಿ ರಟೊ ಹಣಕಾಸು ಅವ್ಯವಹಾರಗಳನ್ನು ನಡೆಸಿರುವುದು ಸಾಬೀತಾಗಿದೆ ಎಂದು ಸ್ಪೇನ್‌ನ ರಾಷ್ಟ್ರೀಯ ನ್ಯಾಯಾಲಯ ಹೇಳಿದೆ.

ಈ ಪ್ರಕರಣವು ಸ್ಪೇನ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾಗ ಈ ಹಗರಣವು ಬೆಳಕಿಗೆ ಬಂದಿತ್ತು. ಬಳಿಕ ಬ್ಯಾಂಕಿಯ ಎಂಬ ಬ್ಯಾಂಕನ್ನು ಉಳಿಸುವುದಕ್ಕಾಗಿ ರಾಷ್ಟ್ರೀಕರಣಗೊಳಿಸಬೇಕಾಗಿ ಬಂದಿತ್ತು.

2003 ಮತ್ತು 2012ರ ನಡುವಿನ ಅವಧಿಯಲ್ಲಿ ರಟೊ ಮತ್ತು ಉಭಯ ಬ್ಯಾಂಕ್‌ಗಳ 64 ಮಾಜಿ ಅಧಿಕಾರಿಗಳು 12 ಮಿಲಿಯ ಯುರೊ (ಸುಮಾರು 85 ಕೋಟಿ ರೂಪಾಯಿ) ಮೊತ್ತವನ್ನು ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News