ಸಿಡ್ನಿ: ನೆತನ್ಯಾಹು ವಿರುದ್ಧ ಬೃಹತ್ ಪ್ರತಿಭಟನೆ

Update: 2017-02-24 15:29 GMT

ಸಿಡ್ನಿ, ಫೆ. 24: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಸ್ಟ್ರೇಲಿಯ ಪ್ರವಾಸವನ್ನು ವಿರೋಧಿಸಿ ನೂರಾರು ಪ್ರತಿಭಟನಕಾರರು ಸಿಡ್ನಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಇಸ್ರೇಲ್ ಪ್ರಧಾನಿಯನ್ನು ‘ಯುದ್ಧಾಪರಾಧಿ’ ಎಂಬುದಾಗಿ ಬಣ್ಣಿಸಿದರು.

ನೆತನ್ಯಾಹು ಮತ್ತು ಅವರ ಸರಕಾರಕ್ಕೆ ಆಸ್ಟ್ರೇಲಿಯ ನೀಡುತ್ತಿರುವ ಬಲವಾದ ಬೆಂಬಲವನ್ನೂ ಪ್ರತಿಭಟನಕಾರರು ಖಂಡಿಸಿದರು.

‘‘ಜನಾಂಗೀಯ ವರ್ಣಭೇದ ನೀತಿ ಅನುಸರಿಸುತ್ತಿರುವ ಇಸ್ರೇಲ್‌ಗೆ ಆಸ್ಟ್ರೇಲಿಯ ನೀಡುತ್ತಿರುವ ಬೆಂಬಲವನ್ನು ವಿರೋಧಿಸಲು ನಾವು ಇಲ್ಲಿದ್ದೇವೆ’’ ಎಂದು ಆಸ್ಟ್ರೇಲಿಯದ ವಕೀಲೆ ರಾಂದಾ ಅಬ್ದುಲ್ ಫತ್ತಾಹ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.

ನೆತನ್ಯಾಹು ಬುಧವಾರ ಆಸ್ಟ್ರೇಲಿಯಕ್ಕೆ ಆಗಮಿಸಿದ್ದಾರೆ. ಇದು ಇಸ್ರೇಲ್ ಪ್ರಧಾನಿಯೊಬ್ಬರು ಆಸ್ಟ್ರೇಲಿಯಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ.

‘ಭಯೋತ್ಪಾದನೆಗೆ ಅವಕಾಶವಿಲ್ಲ’ ಎಂಬ ಬ್ಯಾನರ್‌ಗಳನ್ನು ಹಿಡಿದ ಜನರು ಇತ್ತೀಚೆಗೆ ಟ್ಯುನಿಸ್‌ನಲ್ಲಿ ಟ್ಯುನೀಶಿಯ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು. ವಿದೇಶಗಳಲ್ಲಿ ಐಸಿಸ್ ಭಯೋತ್ಪಾದಕರಿಗೆ ಸೋಲಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಟ್ಯನೀಶಿಯಕ್ಕೆ ಮರಳಬಹುದು ಎಂಬ ಭೀತಿಯನ್ನು ಜನರು ಹೊಂದಿದ್ದಾರೆ.

 ಗುರುವಾರ ಲಿಬಿಯ ಕರಾವಳಿಯಲ್ಲಿ ನಿಯಂತ್ರಣ ತಪ್ಪಿ ಹೋಗುತ್ತಿದ್ದ ದೋಣಿಯೊಂದರಲ್ಲಿದ್ದ ವಲಸಿಗರನ್ನು ಸ್ಪೇನ್‌ನ ಸಂಘಟನೆ ‘ಪ್ರೊಆ್ಯಕ್ಟಿವ ಓಪನ್ ಆರ್ಮ್ಸ್’ ತನ್ನ ಹಡಗಿನಲ್ಲಿ ರಕ್ಷಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News