×
Ad

ಭಟ್ಕಳ: ಫೆ.26 ರಂದು ವೆಲ್ಪೇರ್ ಪಾರ್ಟಿಯಿಂದ ಯುವ ಜಾಗೃತಿ ಸಮಾವೇಶ

Update: 2017-02-24 21:49 IST

ಭಟ್ಕಳ, ಫೆ.24: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕವು ಯುವಕರನ್ನು ಪಕ್ಷದಲ್ಲಿ ಸಂಘಟಿಸುವ ನಿಟ್ಟಿನಲ್ಲಿ ರಾಜ್ಯದ್ಯಂತ ಯುವ ಜಾಗೃತಿ, ದೇಶದ ಸಮೃದ್ಧಿಎಂಬ ಕೇಂದ್ರಿಯ ವಿಷಯದಲ್ಲಿ ಯುವ ಸಮಾವೇಶಗಳನ್ನು ನಡೆಸುತ್ತಿದ್ದು ಫೆ.26 ರಂದು ಭಟ್ಕಳದ ಸಾರ್ವಜನಿಕ ಮೈದಾನ ಹಳೆ ಬಸ್ ನಿಲ್ದಾಣ ಎದರು ಬೃಹತ್ ಯುವ ಸಮಾವೇಶ ಆಯೋಜಸಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಹೇಳಿದರು.

ಅವರು ಇಲ್ಲಿನ ಹೊಟೆಲ್ ಶ್ರಿನೀವಾಸ ದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಫೆ. 26ರ ಮಧ್ಯಾಹ್ನ 3.00 ಗಂಟೆಗೆ ಭಟ್ಕಳದ ಶಂಸುದ್ಧೀನ್ ವೃತ್ತದಿಂದ ರ್ಯಾಲಿ ಚಾಲನೆಗೊಂಡು ಮುಖ್ಯ ರಸ್ತೆಯ ಮೂಲಕ ಚೌಕ್ ಬಝಾರ್, ಸುಲ್ತಾನ್ ಸ್ಟ್ರೀಟ್ ಮಾರ್ಗವಾಗಿ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸಾರ್ವಜನಿಕ ಮೈದಾನ(ಪಬ್ಲಿಕ್ ಚಬೂತ್ರ) ಆವರಣದಲ್ಲಿ ಸಮಾವೇಶಗೊಳ್ಳಲಿದೆ.

ತದನಂತರ ಯುವ ಸಮಾವೇಶದಲ್ಲಿ ಪ್ರಕಾಶ್ ಯಶವಂತ್ ಅಂಬೇಡ್ಕರ್ (ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಭೀಮ್‌ರಾವ್ ಅಂಬೇಡ್ಕರ್ ರವರ ಮೊಮ್ಮಗ), ನಿಕಟಪೂರ್ವ ವೆಲ್ಫೇರ್ ಪಾರ್ಟಿ ರಾಷ್ಟ್ರಾಧ್ಯಕ್ಷರಾಗಿರುವ ಮುಜ್ತಬಾ ಫಾರೂಕ್ ಹಾಗೂ ಮಾಜಿ ಸಚಿವೆ ಹಾಗೂ ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷೆ ಡಾ.ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ನಾಡಿನ ಹಲವು ಚಿಂತಕರು, ಸಾಹಿತಿಗಳು, ದಲಿತ-ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಎಂದೂ ಅವರು ಹೇಳಿದರು.

  ಈ ಸಂದರ್ಭದಲ್ಲಿ ಮುಹಮ್ಮದ್ ಯೂನೂಸ್ ರುಕ್ನುದ್ದೀನ್ ಜಿಲ್ಲಾಧ್ಯಕ್ಷರು ಉ.ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಖತೀಬ್, ಭಟ್ಕಳ ತಾಲೂಕಾಧ್ಯಕ್ಷ ಖಮರುದ್ದೀನ್ ಮಷಾಯಿಖ್, ಅಬ್ದುಲ್ ಮಜೀದ್ ಕೋಲಾ ಯುವ ಜಾಗೃತಿ ಸಮಾವೇಶ ಸಂಚಾಲಕ ಹಾಗೂ ಸೈಯ್ಯದ್ ಅಬುಲ್ ಆಲಾ ಬರ್ಮಾವರ್ ಯುವ ಮೋರ್ಚಾ ಅಧ್ಯಕ್ಷ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News