ಉಡುಪಿ: 24.10 ಕೋಟಿ ರೂ.ಅನುದಾನ ಮಂಜೂರು

Update: 2017-02-24 16:22 GMT

ಉಡುಪಿ, ಫೆ.24: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2016-17ನೇ ಸಾಲಿಗೆ ರಸ್ತೆ ಮತ್ತು ಸೇತುವೆ ಹೊಸ ಕಾಮಗಾರಿಗಳಿಗೆ ಒಟ್ಟು 24.10 ಕೋಟಿ ರೂ.ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.

ಇವುಗಳಲ್ಲಿ ಲೋಕೋಪಯೋಗಿ ಇಲಾಖೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ 21 ಕೋಟಿ ರೂ. ಹಾಗೂ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಚೇರ್ಕಾಡಿ ಗ್ರಾಪಂ ವ್ಯಾಪ್ತಿಯ ಕನ್ನಾರುಗುಡ್ಡೆಯಿಂದ ಬೆನೆಗಲ್‌ವರೆಗಿನ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ 3.10 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದವರು ತಿಳಿಸಿದರು.

ಹೊಸದಾಗಿ ನಿರ್ಮಾಣಕ್ಕೆ ಮಂಜೂರಾದ ರಸ್ತೆ ಮತ್ತು ಸೇತುವೆಗಳ ವಿವರ ಹೀಗಿದೆ:

ಕೆಮ್ಮಣ್ಣು ಗ್ರಾಪಂನ ತಿಮ್ಮಣ್ಣಕುದ್ರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 5 ಕೋಟಿರೂ., ಅಂಬಾಗಿಲು-ಮಣಿಪಾಲ- ಉದ್ಯಾವರ ರಸ್ತೆಯ ಚತುಷ್ಪತಕ್ಕೆ 5 ಕೋಟಿ ರೂ., ಇದರ ಡಕ್ಫ್ ಮತ್ತು ವಿಭಜಕ ನಿರ್ಮಾಣಕ್ಕೆ ಒಂದು ಕೋಟಿ ರೂ., ಕೆಂಜೂರು-ನಾಲ್ಕೂರು-ಶೀರೂರು ರಸ್ತೆ ಅಭಿವೃದ್ಧಿಗೆ 2 ಕೋಟಿರೂ., ಆರೂರು- ಬೊಳ್ಕಾರು-ಕೊಳಲಗಿರಿ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ., ಪೆರಂಪಳ್ಳಿ ಪಾಸ್‌ಕುದ್ರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 4 ಕೋಟಿರೂ., ಬ್ರಹ್ಮಾವರ-ಜನ್ನಾಡಿ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ., ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News