ಮಂಗಳೂರು: ಕೋಟೆಕಾರ್‌ ಹಾಗೂ ತೂಮಿನಾಡುನಲ್ಲಿ ಕೇರಳದ ಬಸ್‌ಗಳಿಗೆ ಕಲ್ಲು ಎಸೆತ

Update: 2017-02-24 17:57 GMT

ಉಳ್ಳಾಲ, ಫೆ.24: ಕೇರಳ -ಕರ್ನಾಟಕ ಗಡಿ ಪ್ರದೇಶ ತೂಮಿನಾಡು ಮತ್ತು ಕೋಟೆಕಾರು ಬೀರಿ ಸಮೀಪ ಕೇರಳ ಸಾರಿಗೆಯ ಎರಡು ಬಸ್ಸುಗಳಿಗೆ ದುಷ್ಕರ್ಮಿಗಳು ಶುಕ್ರವಾರ ಕಲ್ಲೆಸೆದು ಹಾನಿಗೈದ ಘಟನೆ ನಡೆದಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಸಂಘಪರಿವಾರ ಬಂದ್ ಗೆ ಕರೆ ನೀಡಿದ್ದು, ಇದೇ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ ಎಂದು ಶಂಕಿಸಲಾಗಿದೆ.

ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೇರಳ ಸಾರಿಗೆ ಬಸ್‌ಗೆ ಕುಂಜತ್ತೂರು ಸಮೀಪದ ತೂಮಿನಾಡು ಬಳಿ 9.00 ಗಂಟೆಯ ವೇಳೆ ಕಲ್ಲೆಸೆದರೆ ಇನ್ನೊಂದೆಡೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಬೀರಿ ಎಂಬಲ್ಲಿ ಕಲ್ಲೆಸೆಯಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

 ಕೇರಳ ಹಾಗೂ ಕರ್ನಾಟಕ ಪೊಲೀಸರ ಬಿಗಿ ಬಂದೋಬಸ್ತಿನ ನಡುವೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.

 ಸೆಕ್ಷನ್ ಜಾರಿಯಲ್ಲಿದ್ದರೂ ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಉಳ್ಳಾಲ ಹಾಗೂ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News