‘ತೆರಿಗೆ ಪಾವತಿಯಿಂದ ದೇಶದ ಅಭಿವೃದ್ಧಿ ಸಾಧ್ಯ’

Update: 2017-02-24 18:27 GMT

ಪಡುಬಿದ್ರೆ, ೆ.24: 135 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ವರಮಾನ ತೆರಿಗೆ ಪಾವತಿಸುವವರು ಕೇವಲ ಶೇ.3 ಮಂದಿ ಮಾತ್ರ. ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಗಳಿಕೆಯ ಒಂದಂಶವನ್ನು ತೆರಿಗೆಯಾಗಿ ಪಾವತಿಸಿದರೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸರಿಸಮಾನರಾಗಲು ಪೂರಕವಾಗುತ್ತದೆ ಎಂದು ಪಡುಬಿದ್ರೆ ಗ್ರಾಪಂ ಉಪಾಧ್ಯಕ್ಷ ಹಾಗೂ ಜೇಸಿಐ ಇಂಡಿಯಾ ೌಂಡೇಶನ್ ನಿರ್ದೇಶಕ ವೈ.ಸುಕುಮಾರ್ ಹೇಳಿದರು.

ಅವರು ಪಡುಬಿದ್ರೆ ಹೊಟೇಲ್ ಪಲ್ಲವಿಯ ಪಿಂಗಾರ ಸಭಾಭವನದಲ್ಲಿ ಶುಕ್ರವಾರ ಪಡುಬಿದ್ರೆ ರೋಟರಿ ಕ್ಲಬ್ ವತಿಯಿಂದ ನಡೆದ ಡಿಜಿಟಲ್ ಬ್ಯಾಂಕಿಂಗ್ ಮತ್ತು ಪಾನ್‌ಕಾರ್ಡ್ ಮೇಳ ಉದ್ಘಾಟಿಸಿ ಮಾತನಾಡಿದರು. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ದೇಶದ ಸರ್ವಾಂಗೀಣ ಹಾಗೂ ತ್ವರಿತ ಅಭಿವೃದ್ಧಿಗೆ ಪೂರಕವಾಗಿದೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಡಿಜಿಟಲ್‌ಬ್ಯಾಂಕಿಂಗ್ ಇಂದಿನ ಕಾಲಘಟ್ಟದಲ್ಲಿ ಅತ್ಯವಶ್ಯಕವಾಗಿದೆ. ಜನಸಾಮಾನ್ಯರು ಇದಕ್ಕೆ ಶೀಘ್ರವಾಗಿ ಹೊಂದಿಕೊಳ್ಳಬೇಕು ಎಂದರು. ಡಿಜಿಟಲ್ ಬ್ಯಾಂಕಿಂಗ್ ಮತ್ತು ಪಾನ್‌ಕಾರ್ಡ್ ಮೇಳ ಕುರಿತು ಮಾಹಿತಿ ನೀಡಿದ ಕಲ್ಲಮುಂಡ್ಕೂರು ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಅಶೋಕ್ ಶೆಟ್ಟಿ, ಇಂದಿನ ಕಾರ್ಯಕ್ರಮ ಸಕಾಲಿವಾದುದು. ಹಳೆಯ ನೋಟ್ ಬ್ಯಾನ್ ಆದ ಬಳಿಕ ನಗದುರಹಿತ ವ್ಯವಹಾರ ಕಡ್ಡಾಯವಾಗಿದೆ. ಹಣಕಾಸಿನ ವ್ಯವಹಾರ ಪಾರದರ್ಶಕವಾಗಿರಲು ಇದು ಅನಿವಾರ್ಯ. ಸಾರ್ವಜನಿಕರು ಶೀಘ್ರವಾಗಿ ಇದಕ್ಕೆ ಹೊಂದಿಕೊಳ್ಳಬೇಕು ಎಂದರು.

ರೋಟರಿ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾರ್ಯಕ್ರಮ ನಿರ್ದೇಶಕ ಇಸ್ಮಾಯೀಲ್ ಪಲಿಮಾರ್, ಸುಧಾಕರ ಕೆ. ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕರುಣಾಕರ ನಾಯಕ್ ವಂದಿಸಿದರು. ಆ ಬಳಿಕ ನಡೆದ ಪಾನ್‌ಕಾರ್ಡ್ ಮೇಳದಲ್ಲಿ 100ಕ್ಕೂ ಅಕ ಮಂದಿಯಿಂದ ಪಾನ್‌ಕಾರ್ಡ್ ಅರ್ಜಿ ಸ್ವೀಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News