ಕುಂಟುತ್ತಾ ಸಾಗಿದೆ ಭಾರತದ ಪ್ರಥಮ 3ಡಿ ತಾರಾಲಯ ಕಾಮಗಾರಿ

Update: 2017-02-24 18:28 GMT

ಮಂಗಳೂರು, ಫೆ.24: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ 3 ವರ್ಷಗಳ ಹಿಂದೆ ಆರಂಭಗೊಂಡ ಏಷ್ಯಾದ ಅತ್ಯಾಧುನಿಕ ಹಾಗೂ ಭಾರತದ ಪ್ರಥಮ ತಾರಾಲಯ(ತ್ರಿಡಿ ಪ್ಲಾನಿಟೋರಿಯಂ) ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಮೀಪದ ವಿಶಾಲವಾದ ಜಾಗದಲ್ಲಿ 2014ರ ಫೆಬ್ರವರಿ 13ರಂದು ಸುಮಾರು 24.5 ಕೋಟಿ ರೂ. ವೆಚ್ಚದ ಭಾರತದ ಪ್ರಥಮ 3ಡಿ ‘ಸ್ವಾಮಿ ವಿವೇಕಾನಂದ ತಾರಾಲಯ’ದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿತ್ತು.

ಅಂದು ಶಿಲಾನ್ಯಾಸ ನೆರವೇರಿಸಿದ್ದ ಶಾಸಕ ಜೆ.ಆರ್.ಲೋಬೊ, ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 18 ತಿಂಗಳ ಕಾಲಾವಕಾಶವಿದ್ದರೂ, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಹಕರಿಸುವಂತೆ ಕೋರಿದ್ದರು. ಇದೀಗ ಶಿಲಾನ್ಯಾಸ ನೆರ ವೇರಿ ಮೂರು ವರ್ಷಗಳೇ ಕಳೆದಿವೆ. ತಾರಾಲಯ ಕಟ್ಟಡ ತಲೆಯೆತ್ತಿದೆ. ಆದರೆ ಇನ್ನೂ ಅತ್ಯಾಧುನಿಕ ಉಪಕರಣ ಗಳ ಜೋಡಣೆ ಸೇರಿದಂತೆ ತಾಂತ್ರಿಕ ಕೆಲಸ ಪೂರ್ಣಗೊಂಡಿಲ್ಲ.

ಸುಮಾರು 6 ವರ್ಷಗಳ ಹಿಂದೆ ತಾರಾಲಯ ಕಾಮಗಾರಿ ಆರಂಭಕ್ಕೆ ಒಪ್ಪಿಗೆ ಪಡೆಯುವ ಪ್ರಯತ್ನ ಆರಂಭಗೊಂಡು ಕೊನೆಗೂ 2014 ರಲ್ಲಿ ಶಿಲಾನ್ಯಾಸ ನೆರವೇರಿತ್ತು. ಇನ್ನು ಅಂತಾರಾಷ್ಟ್ರೀಯ ಬಿಡ್ಡಿಂಗ್ ಮೂಲಕ ತಾರಾಲಯದ ಉಪಕರಣಗಳ ಜೋಡಣೆಯಾಗಬೇಕಿದ್ದು, ಇದಕ್ಕಾಗಿ ಅಮೆರಿಕದ ಕಂಪೆನಿಯೊಂದು ಈಗಾ ಗಲೇ ಮುಂದೆ ಬಂದಿದೆ. ಟೆಂಡರ್ ಅಂತಿಮಗೊಂಡಿದ್ದು, ಹಣವೂ ಮಂಜೂ ರಾಗಿದೆ. ಈ ನಡುವೆ ಾರಾಲ ಯದ ಅಂದಾಜು ವೆಚ್ಚ 35 ಕೋ. ರೂ.ಗೆ ಏರಿಕೆಯಾಗಿದೆ ಎಂದು ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ತಿಳಿಸಿದ್ದಾರೆ. 

‘‘ವರ್ಷದಿಂದ ವರ್ಷಕ್ಕೆ ತಂತ್ರಜ್ಞಾನ ದಲ್ಲಿ ಬದಲಾಣೆ ಆಗುತ್ತಿರುವುದರಿಂದ ತಾರಾಲಯದ ಆಧುನಿಕ ಉಪಕರಣ ಗಳ ಜೋಡಣೆಯಲ್ಲೂ ಬದಲಾವಣೆ ಮಾಡಬೇಕಾಗಿದೆ. ಹಾಗಾಗಿ ವಿಳಂಬ ವಾಗಿದೆ. ಈಗಾಗಲೇ ಅಮೆರಿಕದ ಕಂಪೆನಿ ಟೆಂಡರ್ ಅಂತಿಮ ಗೊಳಿಸಿದ್ದು, ಹಣ ಮಂಜೂರಾಗಿರುವುದರಿಂದ ಮುಂದಿನ ಆರು ತಿಂಗಳೊಳಗೆ ತಾರಾಲಯ ಕಾಮಗಾರಿ ಪೂರ್ಣ ಗೊಂಡು ಉದ್ಘಾಟನೆಯಾಗುವ ಸಾಧ್ಯತೆ ಇದೆ’’ ಎಂದು ಡಾ.ಕೆ.ವಿ. ರಾವ್ ತಿಳಿಸಿದ್ದಾರೆ.

ಏಷ್ಯಾದ ಅತ್ಯಾಧುನಿಕ ಹಾಗೂ ಭಾರತದ ಪ್ರಥಮ 3ಡಿ ತಾರಾಲಯ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದ್ದು, 18 ಮೀಟರ್ ವ್ಯಾಸದ ಗುಮ್ಮಟ ತಾರಾಲಯದ ಪ್ರಮುಖ ಆಕರ್ಷಣೆಯಾಗಿದೆ. ಸ್ಕೈ ಥಿಯೇಟರ್, ವಸ್ತು ಪ್ರದರ್ಶನ ಗ್ಯಾಲರಿ, ಖಗೋಳ ಪಾರ್ಕ್ ಈ ತಾರಾಲಯದ ವಿಶೇಷ ಆಕರ್ಷಣೆಗಳಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News