ನಾಳೆ ಸನ್ಮಾನ ಸಮಾರಂಭ
ವಿಟ್ಲ, ೆ.24: ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲು-ಬಿ.ಸಿ.ರೋಡು ಹಾಗೂ ಅೀನ ಮದ್ರಸಾ ಕಮಿಟಿ ಹಾಗೂ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ನೂತನ ಉಪಾಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಉಸ್ತಾದ್ ಅವರಿಗೆ ಸನ್ಮಾನ ಸಮಾರಂಭವು ೆ.26ರಂದು ಸಂಜೆ 4:30ಕ್ಕೆ ಮಸೀದಿಯ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಸೀದಿಯ ಅಧ್ಯಕ್ಷ ಹಬೀಬುಲ್ಲಾ ತಿಳಿಸಿದರು. ಇತ್ತೀಚೆಗೆ ಬಿ.ಸಿ.ರೋಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನ್ಮಾನ ಸಮಾರಂಭದಲ್ಲಿ ಸೈಯದ್ ಅಲಿ ತಂಳ್ ಕುಂಬೋಳ್ ದುಆಶೀರ್ವಚನಗೈಯಲಿದ್ದಾರೆ. ಅತ್ರಾಡಿ ಖಾಝಿ ಹಾಜಿ ವಿ.ಕೆ. ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸುವರು.
ಮಿತ್ತಬೈಲು ಎಂಜೆಎಂ ಅಧ್ಯಕ್ಷ ಹಬೀಬುಲ್ಲಾ ಅಧ್ಯಕ್ಷತೆ ವಹಿಸಲಿರುವರು. ಕೇರಳ ರಾಜ್ಯ ದಾರಿಮೀಸ್ ಅಸೋಸಿಯೇಶನ್ ಅಧ್ಯಕ್ಷ ಸೈಯದ್ ಅಬ್ದುರ್ರಶೀದ್ ಅಲಿ ಶಿಹಾಬ್ ತಂಳ್ ಪಾಣಕ್ಕಾಡ್ ಸನ್ಮಾನ ನೆರವೇರಿಸುವರು. ಸುದ್ದಿಗೋಷ್ಠಿಯಲ್ಲಿ ಮಿತ್ತಬೈಲು ಎಂಜೆಎಂ ಕಾರ್ಯದರ್ಶಿ ಮುಹಮ್ಮದ್ ಅದ್ದೇಡಿ, ಕೋಶಾಕಾರಿ ಎಸ್.ಎಂ. ಮುಹಮ್ಮದ್ ಅಲಿ, ಸ್ವಾಗತ ಸಮಿತಿ ಕಾರ್ಯದರ್ಶಿ ಸಲಾಂ, ಹನ್ೀ ನಂದರಬೆಟ್ಟು ಉಪಸ್ಥಿತರಿದ್ದರು.