ನಾಳೆ ರೋಯ್ ಕ್ಯಾಸ್ತಲಿನೊರಿಗೆ ಅಭಿನಂದನೆ
Update: 2017-02-25 00:02 IST
ಮಂಗಳೂರು, ೆ.24: ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಯಶಸ್ವಿ 3 ವರ್ಷ ಪೂರೈಸಿದ ರೋಯ್ ಕ್ಯಾಸ್ತಲಿನೊರಿಗೆ ಮಾಂಡ್ ಸೊಭಾಣ್ ಹಾಗೂ ಇತರ ಕೊಂಕಣಿ ಸಂಘಟನೆಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮವು ೆ.26ರಂದು ಶಕ್ತಿನಗರದ ಕಲಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಉದ್ಯಮಿ, ಶಿಕ್ಷಣ ತಜ್ಞ ಆಲ್ಬರ್ಟ್ ಡಿಸೋಜ, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ನರೇಂದ್ರ ನಾಯಕ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.