ನಾಳೆ ಶಾಮಿಯಾನ ಸಂಯೋಜಕರ ಕ್ರೀಡೋತ್ಸವ
ಉಡುಪಿ, ೆ.24: ಉಡುಪಿ ಜಿಲ್ಲಾ ಶಾಮಿಯಾನ ಸಂಯೋಜಕರ ಒಕ್ಕೂಟ ತನ್ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ೆ.26ರಂದು ಬಾರಕೂರಿನ ನ್ಯಾಷನಲ್ ಪ.ಪೂ. ಕಾಲೇಜಿನ ಉಮಾಶಂಕರ ಶೆಟ್ಟಿ ಸ್ಮಾರಕ ಕ್ರೀಡಾಂಗಣದಲ್ಲಿ ಕ್ರೀಡೋತ್ಸವವನ್ನು ಹಮ್ಮಿಕೊಂಡಿದೆ ಎಂದು ಒಕ್ಕೂಟದ ಸಂಚಾಲಕ ವಿಜಯಕುಮಾರ್ ಕಲ್ಯಾಣಪುರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಶಾಮಿಯಾನ ಸಂಯೋಜಕರ ಒಕ್ಕೂಟದಲ್ಲಿ ಇಂದು 500 ಸದಸ್ಯರಿದ್ದು, ಇದು ಜಿಲ್ಲೆಯಲ್ಲಿ ಸಾವಿರಾರು ಮಂದಿಗೆ ಉದ್ಯೋಗವನ್ನು ಸೃಷ್ಟಿಸಿದೆ. ೆ.26ರಂದು ದಿನವಿಡೀ ನಡೆಯುವ ಕ್ರೀಡೋತ್ಸವವನ್ನು ಬೆಳಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ನ್ಯಾಷನಲ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಯು. ಕೊಟ್ರಸ್ವಾಮಿ ಕ್ರೀಡಾಜ್ಯೋತಿ ಬೆಳಗಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಜಿಲ್ಲಾ ಕಾರ್ಯದರ್ಶಿ ಗಣೇಶ್ ಎಂ., ಕ್ರೀಡಾ ಕಾರ್ಯದರ್ಶಿ ರಾಜೇಶ್ ಅಲೆವೂರು, ರಾಜೇಶ್ ಸುವರ್ಣ ಉಪಸ್ಥಿತರಿದ್ದರು.