‘ಶ್ರದ್ಧೆಯಿಂದ ಶ್ರಮವಿಲ್ಲ, ನಂಬಿಕೆಯಿಂದ ಸೋಲಿಲ್ಲ’

Update: 2017-02-24 18:34 GMT

ಬೆಳ್ತಂಗಡಿ, ೆ.24: ಶ್ರದ್ಧೆಯಿಂದ ಶ್ರಮವಿಲ್ಲ. ನಂಬಿಕೆಯಿಂದ ಸೋಲಿಲ್ಲ. ಭಕ್ತಿಯಿಂದ ಭಯವಿಲ್ಲ. ನಮ್ಮ ದೇಹದಲ್ಲಿ ಆತ್ಮ ಇದ್ದರೆ ಶಿವ, ಇಲ್ಲದಿದ್ದರೆ ಅದು ಶವ. ನಿರಾಕಾರವಾದ ಪರಶಿವನ ಮಹಿಮೆ ಅಪಾರವಾಗಿದ್ದು ಪ್ರಾರ್ಥನೆ, ಧ್ಯಾನ, ವ್ರತೋಪಾಸನೆಯಿಂದ ಆತ್ಮ ಧ್ಯಾನದ ಮೂಲಕ ಶಿವ ದರ್ಶನವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಶುಕ್ರವಾರ ಧರ್ಮಸ್ಥಳದಲ್ಲಿ ಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ನಡೆಯುವ ಶಿವ ಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭ ಹೇಮಾವತಿ ವಿ.ಹೆಗ್ಗಡೆ, ಸುಪ್ರೀಯಾ ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್, ಶ್ರೇಯಸ್ ಕುಮಾರ್, ನಿಶ್ವಲ್ ಕುಮಾರ್, ಪಾದಯಾತ್ರೆಯ ನೇತೃತ್ವ ವಹಿಸಿದ್ದ ಹನುಮಂತಪ್ಪ, ಮರಿಯಪ್ಪ, ಡಾ.ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ, ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News