ಸವಾಲು ಸ್ವೀಕರಿಸುವವ ಉತ್ತಮ ಅಧಿಕಾರಿಯಾಗಲು ಸಾಧ್ಯ: ಪ್ರಭಾಕರ್

Update: 2017-02-24 18:39 GMT

  ಮಂಗಳೂರು, ೆ.24: ಸವಾಲುಗಳನ್ನು ಸ್ವೀಕರಿಸಿ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡುವವರು ಉತ್ತಮ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಎಂಸಿಎ್ನ ನಿರ್ದೇಶಕ ಕೆ.ಪ್ರಭಾಕರ್ ರಾವ್ ಹೇಳಿದ್ದಾರೆ.

ಅವರು ಇಂದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆ್ ಪೀಪಲ್ ಮ್ಯಾನೇಜ್‌ಮೆಂಟ್ ಹಾಗೂ ಸಹ್ಯಾದ್ರಿ ಕಾಲೇಜ್ ಆ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ಪ್ರಸಕ್ತ ಮಾನವ ಸಂಪನ್ಮೂಲ ಸದ್ಬಳಕೆ ಮತ್ತು ಕಾರ್ಮಿಕ ಕಾನೂನು ವ್ಯವಸ್ಥೆಯಲ್ಲಿ ವ್ಯವಹಾರ ಕೌಶಲ್ಯಗಳ ಅಭಿವೃದ್ಧಿ ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

 ಕಾರ್‌ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ ಇಂಡಿಯಾ ಲಿಮಿಟೆಡ್‌ನ ಪಾಲುದಾರ ಶೈಲೇಂದ್ರ ಭಟ್‌ಕಂಡೆ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಡಿಎಂ ಪಿಜಿ ಸೆಂಟರ್‌ನ ನಿರ್ದೇಶಕ ಡಾ.ದೇವರಾಜ್ ಕೆ, ಸಹ್ಯಾದ್ರಿ ಕಾಲೇಜ್ ಆ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ನಿರ್ದೇಶಕಿ ಡಾ.ವಿಶಾಲ್ ಸಮರ್ಥ, ಕಾಲೇಜಿನ ಪ್ರಾಂಶುಪಾಲ ಡಾ.ಉಮೇಶ್ .ಎಂ. ಭೂಶಿ ಉಪಸ್ಥಿತರಿದ್ದರು. ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆ್ ಪೀಪಲ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಪಿ.ಸುರೇಶ್ ಸ್ವಾಗತಿಸಿದರು. ಸಂಯೋಜಕಿ ಪ್ರೊ.ಸುಶ್ಮಾ ವಿ. ವಂದಿಸಿದರು. ವಿದ್ಯಾರ್ಥಿನಿ ಸುಪ್ರಿತಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News