ಮೊದಲ ಟೆಸ್ಟ್: ಸ್ಮಿತ್ 18ನೆ ಶತಕ

Update: 2017-02-25 05:55 GMT

ಪುಣೆ, ಫೆ.25: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೆ ದಿನವಾಗಿರುವ ಇಂದು ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಎರಡನೆ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದಾರೆ.

51ನೆ ಟೆಸ್ಟ್ ಆಡುತ್ತಿರುವ ಸ್ಮಿತ್ 18ನೆ ಶತಕ ದಾಖಲಿಸಿದರು. 187 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ ಸ್ಮಿತ್ ಶತಕ ಪೂರ್ಣಗೊಳಿಸಿದರು.
 
  ಎರಡನೆ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ 46 ಓವರ್‌ಗಳಲ್ಲಿ 4ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿತ್ತು. ನಾಯಕ ಸ್ಟೀವ್ ಸ್ಮಿತ್ 59 ರನ್ ಮತ್ತು ಮಿಷೆಲ್ ಮಾರ್ಷ್ ಔಟಾಗದೆ 21 ರನ್ ಗಳಿಸಿ ಕೀಸ್‌ನಲ್ಲಿದ್ದರು.

ಇಂದು ಆಟ ಮುಂದುವರಿಸಿದ ಸ್ಮಿತ್ ಅವರು ಮಾರ್ಷ್ ಜೊತೆ 5ನೆ ವಿಕೆಟ್‌ಗೆ 56 ರನ್ ಸೇರಿಸಿದರು. ಮಿಷೆಲ್ ಮಾರ್ಷ್ 31 ರನ್ ಗಳಿಸಿ ಔಟಾದರು. ಮ್ಯಾಥ್ಯೂ ವೇಡ್ 20 ರನ್ ಗಳಿಸಿ ಔಟಾಗಿದ್ದಾರೆ.

 109 ರನ್ ಗಳಿಸಿದ ಸ್ಮಿತ್ ಅವರನ್ನು ಜಡೇಜ ಎಲ್‌ಬಿಡಬ್ಲು ಬಲೆಗೆ ಕೆಡವಿದರು. 78 ಓವರ್‌ಗಳ ಮುಕ್ತಾಯಕ್ಕೆ ಆಸ್ಟ್ರೇಲಿಯ ಎರಡನೆ ಇನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟದಲ್ಲಿ 258 ರನ್ ಗಳಿಸಿದ್ದು, ಆಸ್ಟ್ರೇಲಿಯ ಒಟ್ಟು 413 ರನ್‌ಗಳ ಮೇಲುಗೈ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News