​ಮೊದಲ ಟೆಸ್ಟ್ : ಭಾರತದ ಗೆಲುವಿಗೆ 441 ರನ್‌ಗಳ ಸವಾಲು

Update: 2017-02-25 06:39 GMT

ಪುಣೆ, ಫೆ.25: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ನ ಮೊದಲ ಇನಿಂಗ್ಸ್‌ನಲ್ಲಿ ಭಾರತದ ವಿರುದ್ಧ 155ರನ್‌ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯ ತಂಡ ಎರಡನೇ ಇನಿಂಗ್ಸ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು, ಭಾರತ ಗೆಲುವಿಗೆ 441 ಕಠಿಣ ಸವಾಲು ಪಡೆದಿದೆ

ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನವಾಗಿರುವ ಇಂದು   ಆಸ್ಟ್ರೇಲಿಯ ಎರಡನೇ ಇನಿಂಗ್ಸ್‌ನಲ್ಲಿ 87 ಓವರ‍್ ಗಳಲ್ಲಿ 285ರನ್‌ ಗಳಿಗೆ ಆಲೌಟ್‌ ಆಗಿದೆ. ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್‌ ಸ್ಮಿತ್ 109 ರನ್ ಗಳಿಸಿದರು.

ಭಾರತದ  ಆರ್ ಅಶ್ವಿನ್ 119ಕ್ಕೆ 4, ಜಡೇಜ 65ಕ್ಕೆ 3, ಉಮೇಶ್ ಯಾದವ್ 39ಕ್ಕೆ 2, ಜಯಂತ್ ಯಾದವ್ 43ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News