×
Ad

ಪುತ್ತೂರು: ಫೆ.26ಕ್ಕೆ ಚಪ್ಪಾರಪಡವು ಜಾಮಿಅ: ಇರ್ಫಾನಿಯ್ಯಃ ಬೆಳ್ಳಿಹಬ್ಬ ಸಮಾರೋಪ ಸಮಾರಂಭ

Update: 2017-02-25 18:28 IST

ಪುತ್ತೂರು, ಫೆ.25: ಆಧ್ಯಾತ್ಮಿಕ ಪ್ರಮುಖ ಸೂಫೀವರ್ಯ ಚಪ್ಪಾರಪಡವು ವಿ. ಮುಹಮ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಇರ್ಫಾನಿಯ್ಯಃ ಅರೇಬಿಕ್ ಕಾಲೇಜ್‌ನ ಬೆಳ್ಳಿಹಬ್ಬ ಆಚರಣೆ ಸಮಾರೋಪ ಸಮಾರಂಭ ಫೆ.26ರಂದು ಕೇರಳ ಕಣ್ಣೂರು ಜಿಲ್ಲೆಯ ತಲಿಪರಂಬು ಸಮೀಪದ ಚಪ್ಪಾರಪಡವು ಎಂಬಲ್ಲಿ ನಡೆಯಲಿದೆ.

ಇಲ್ಲಿನ ಖಿಲ್‌ರಿಯಾ ನಗರದಲ್ಲಿ ಸಂಜೆ ಗಂಟೆ 7 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅನೇಕ ಮಂದಿ ಖ್ಯಾತ ಧಾರ್ಮಿಕ ವಿದ್ವಾಂಸರು ಭಾಗವಹಿಸಲಿದ್ದಾರೆ.

ಕಣ್ಣೂರು ಜಿಲ್ಲೆಯಲ್ಲಿ ಪ್ರಥಮವಾಗಿ ಸನದುದಾನ ಆರಂಭಿಸಿದ ಈ ಧಾರ್ಮಿಕ ಸಂಸ್ಥೆ ಕಳೆದ 25 ವರ್ಷಗಳಿಂದ ಶೈಕ್ಷಣಿಕ, ಸಾಮಾಜಸೇವೆ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಬೆಳೆದು ಬಂದಿದೆ.

 ವಿ. ಮುಹಮ್ಮದ್ ಮುಸ್ಲಿಯಾರ್ ಅವರ ಶ್ರಮದಿಂದ ಸ್ಥಾಪನೆಗೊಂಡ ಈ ಸಂಸ್ಥೆಯ ಅಧೀನದಲ್ಲಿ 13 ಜ್ಯೂನಿಯರ್ ಕಾಲೇಜುಗಳು, ಅನಾಥ ಮತ್ತು ನಿರ್ಗತಿಕರ ಆಶ್ರಯಧಾಮ, ಹಿಫುಲುಲ್ ಖುರ್‌ಆನ್ ಕಾಲೇಜು ಸುನ್ನತ್ ಜಮಾಅತ್‌ನ ಆಶಯದಂತೆ ಕಾರ್ಯಾಚರಿಸುತ್ತಿದೆ. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯದಿಂದ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News