ಪುತ್ತೂರು: 3 ಸರಕಾರಿ ಬಸ್‌ಗಳಿಗೆ ಕಲ್ಲು ತೂರಾಟ
Update: 2017-02-25 20:07 IST
ಪುತ್ತೂರು, ಫೆ.25: ಸಂಘ ಪರಿವಾರ ಕರೆ ನೀಡಿದ್ದ ಜಿಲ್ಲಾ ಬಂದ್ ಸಂದರ್ಭದಲ್ಲಿ ಪುತ್ತೂರಿನಲ್ಲಿ ಮೂರು ಸರಕಾರಿ ಬಸ್ಸುಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪ್ರಕರಣ ದಾಖಲಾಗಿದೆ.
ಮೂರು ಸರಕಾರಿ ಬಸ್‌ಗಳ ಎದುರಿನ ಗಾಜುಗಳಿಗೆ ಹಾನಿ ಉಂಟಾಗಿದ್ದು, ಪುತ್ತೂರು ನಗರ ಠಾಣೆಯಲ್ಲಿ 3 ಪತ್ಯೇಕ ಪ್ರಕರಣ ದಾಖಲಾಗಿದೆ.
ನಗರದ ಹೊರವಲಯದ ಕೆಮ್ಮಾಯಿ ಎಂಬಲ್ಲಿ ಪುತ್ತೂರು - ಉಪ್ಪಿನಂಗಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸಿಗೆ, ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಬಸ್ಸಿಗೆ ಮತ್ತು ಬೆದ್ರಾಳ ಎಂಬಲ್ಲಿ ನಿಂತಿಕಲ್ ಕಡೆಯಿಂದ ಕಾಣಿಯೂರು, ಸವಣೂರು ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಬಸ್ಸಿಗೆ ಕಲ್ಲು ತೂರಟ ನಡೆಸಲಾಯಿತು.
ಮೂರು ಪ್ರಕರಣದಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೇದಮೂರ್ತಿ ಅವರು ಪುತ್ತೂರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದರು.