×
Ad

ಉಡುಪಿ: ಆರ್ಟಿಸ್ಟ್ರೀ ಬ್ರಾಂಡೆಡ್ ಆಭರಣ ಪ್ರದರ್ಶನಗಳ ಉದ್ಘಾಟನೆ

Update: 2017-02-25 20:16 IST

ಉಡುಪಿ, ಫೆ.25: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ಮಳಿಗೆಯಲ್ಲಿ ನಾಲ್ಕು ದಿನಗಳ ಕರಾವಳಿ ಕರ್ನಾಟಕದ ಬೃಹತ್ ಆಭರಣ ಪ್ರದರ್ಶನ(ಆರ್ಟಿಸ್ಟ್ರೀ ಬ್ರಾಂಡೆಡ್ ಜ್ಯುವೆಲ್ಲರಿ ಶೋ)ವನ್ನು ಱಬರ್ಸೞ ತುಳು ಸಿನೆಮಾದ ನಾಯಕಿ ಕ್ಷಮಾ ಶೆಟ್ಟಿ ಶನಿವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾದ ಮೇಘನಾ 'ಮೈನ್ ವಜ್ರಾಭರಣ', ತನ್ಯ ಶೆಟ್ಟಿ 'ಇರಾ ಅನ್‌ಕಟ್ ವಜ್ರಾಭರಣ', ವೈಷ್ಣವಿ 'ಡಿವೈನ್ ಇಂಡಿಯನ್ ಹೆರಿ ಟೇಜ್ ಆಭರಣ', ನಿಧಿ ಶೆಟ್ಟಿ ಎತ್ನಿಕ್ಸ್ ಹ್ಯಾಂಡ್‌ಕ್ರಾಫ್ಟ್ ಆಭರಣ ಪ್ರದರ್ಶನಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.

ಅದೇ ರೀತಿ ಪ್ರೇಸಿಯಾದಿಂದ ಅತ್ಯಮೂಲ್ಯ ರತ್ನದ ಆಭರಣ, ಸ್ಟಾರ್‌ಲೆಟ್ ಮಕ್ಕಳ ಆಭರಣ, ಹೈಲೈಟ್ ವೈಟ್ ಕ್ಯಾಶುವಲ್ ಆಭರಣಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಉಡುಪಿ ಮಳಿಗೆಯ ಮುಖ್ಯಸ್ಥ ಹಫೀಝ್ ರೆಹಮಾನ್ ಉಪಸ್ಥಿತರಿದ್ದರು.ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಫೆ.28ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಈ ಅತ್ಯಮೂಲ್ಯ ಆಭರಣಗಳನ್ನು ವಿಶೇಷ ರಿಯಾಯಿತಿಯೊಂದಿಗೆ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.

ಮಾ.9ರವರೆಗೆ ನಡೆಯುವ ವಾರದ ಲಕ್ಕಿ ಡ್ರಾದಲ್ಲಿ ಬಹು ಮಾನ ಹಾಗೂ ಚಿನ್ನದ ಬಾರ್ ಗೆಲ್ಲುವ ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News