ಗುಜರಾತ್ ಹತ್ಯಾಕಾಂಡ ಮೊಕದ್ದಮೆಗಳನ್ನು ತ್ವರಿತಗೊಳಿಸಿ :ಭಾರತೀಯ ಸುಪ್ರೀಂ ಕೋರ್ಟ್‌ಗೆ ಅಮೆರಿಕನ್ ಸಂಘಟನೆ ಮನವಿ

Update: 2017-02-25 15:32 GMT

ವಾಶಿಂಗ್ಟನ್, ಫೆ. 25: 2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಾಶಿಂಗ್ಟನ್‌ನಲ್ಲಿರುವ ಭಾರತೀಯ ಅಮೆರಿಕನ್ ಮುಸ್ಲಿಮ್ ಸಂಘಟನೆ ‘ಅಸೋಸಿಯೇಶನ್ ಆಫ್ ಇಂಡಿಯನ್ ಮುಸ್ಲಿಮ್ಸ್ ಆಫ್ ಅಮೆರಿಕ (ಎಐಎಂ) ಭಾರತದ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದೆ.

‘‘ಕೆಲವು ಪ್ರತ್ಯೇಕತಾವಾದಿ ಸಂಘಟನೆಗಳು ಅಮಾಯಕ ಮುಸ್ಲಿಮ್ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಗುಜರಾತ್ ರಾಜ್ಯದ ವಿವಿಧ ನಗರಗಳಲ್ಲಿ ಸುಸಂಘಟಿತ ಅಮಾನುಷ ಆಕ್ರಮಣಗಳನ್ನು ನಡೆಸಿ 15 ವರ್ಷಗಳು ಉರುಳಿವೆ. ಆದರೆ ನೂರಾರು ಅಪರಾಧಿಗಳ ಪೈಕಿ ಕೇವಲ ಕೆಲವೇ ಮಂದಿ ಪಾತಕಿಗಳನ್ನು ಜೈಲಿಗೆ ಕಳುಹಿಸಲಾಗಿದೆ.

ಭಾರತೀಯ ಸುಪ್ರೀಂ ಕೋರ್ಟ್‌ನ ಸ್ಪಷ್ಟ ಸೂಚನೆಗಳ ಹೊರತಾಗಿಯೂ ಗುಜರಾತ್ ಸರಕಾರದ ಅಧಿಕಾರಿಗಳು ನ್ಯಾಯಾಲಯಗಳಲ್ಲಿರುವ ಮೊಕದ್ದಮೆಗಳಿಗೆ ಸಂಬಂಧಿಸಿ ವಿಳಂಬ ನೀತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಅದೂ ಅಲ್ಲದೆ, ಹತ್ಯಾಕಾಂಡಗಳ ನೇತೃತ್ವ ವಹಿಸಿದ ಆರೋಪ ಸಾಬೀತಾಗಿರುವ ಹಲವು ವ್ಯಕ್ತಿಗಳನ್ನು ಆರೋಗ್ಯದ ಕಾರಣ ನೀಡಿ ಬಿಡುಗಡೆ ಮಾಡಲಾಗುತ್ತಿದೆ. ಅದೇ ರೀತಿ, ಅಪರಾಧಿಗಳೆಂದು ಸಾಬೀತಾದ ಪೊಲೀಸ್ ಅಧಿಕಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ’’ ಎಂದು ಸಂಘಟನೆಯು ತನ್ನ ಮನವಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News