ಹೆಬ್ರಿ: ಮುದ್ರಾಡಿ ರಾಷ್ಟ್ರೀಯ ರಂಗೋತ್ಸವಕ್ಕೆ ಚಾಲನೆ

Update: 2017-02-25 16:21 GMT

ಹೆಬ್ರಿ, ಫೆ.25: ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘ ಟನೆಯ ಆಶ್ರಯದಲ್ಲಿ ನಾಟ್ಕದೂರಿನ ಚೌಟರ ಬಯಲಿನಲ್ಲಿ ಹಮ್ಮಿಕೊಳ್ಳಲಾಗಿರುವ ಏಳು ದಿನಗಳ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಮುದ್ರಾಡಿ ಶ್ರೀಆದಿಶಕ್ತಿ ದೇವಾಲಯದ ಬಳಿ ಸುಮಾರು 63ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಱಚೌಟರ ಬಯಲುೞ ಬಯಲು ರಂಗ ಮಂದಿರ ವನ್ನು ಉಡುಪಿ ಅದಾನಿ ಯುಪಿಸಿಎಲ್‌ನ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು. ರಂಗ ಕಲಾವಿದ ಮುಂಬೈ ಮೋಹನ್ ಮಾನರಾಡ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಕಳ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ನಾಟ್ಕ ಮುದ್ರಾಡಿ ಸಂಸ್ಥಾಪಕ ಧರ್ಮಯೋಗಿ ಮೋಹನ್, ಜಿಪಂ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ರಂಗ ನಿರ್ದೇಶಕ ರಾದ ಡಾ.ಶ್ರೀಪಾದ ಭಟ್, ಕೃಷ್ಣಮೂರ್ತಿ ಕವತ್ತಾರ್, ನೀರೆ ಕೃಷ್ಣ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ ಮುದ್ರಾಡಿ ಭಾಗವಹಿಸಿದ್ದರು.

  ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ವಾಣಿ ಸುಕುಮಾರ್ ಮೋಹನ್, ಸುಧೀಂದ್ರ ಮೋಹನ್, ಉಮೇಶ್ ಕಲ್ಮಾಡಿ, ಸುಗಂಧಿ ಉಮೇಶ್ ಕಲ್ಮಾಡಿ, ಸುರೇಂದ್ರ ಮೋಹನ್ ಉಪಸ್ಥಿತರಿದ್ದರು. ರಂಗನಟ ನಿರ್ದೇಶಕ ಬೆಂಗಳೂರಿನ ಜಗದೀಶ್ ಜಾಲ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

ಬಳಿಕ ರಂಗಾಯಣ ಧಾರವಾಡ ದಿಂದ ಪ್ರೊ.ಗಣೇಶ್ ಚಂದನಶಿವೆ ನಿರ್ದೇಶನದ 'ತಮಾಶಾ' ಕನ್ನಡ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News