ಮಂಗಳೂರು ಬಂದ್: ಸುರತ್ಕಲ್, ಬಜ್ಪೆಯಲ್ಲಿ ನೀರಸ ಬೆಂಬಲ

Update: 2017-02-25 16:34 GMT

ಸುರತ್ಕಲ್, ಫೆ.25: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿಯ ವಿರುದ್ಧ ಸಂಘ ಪರಿವಾರ ಕರೆ ನೀಡಿದ ಮಂಗಳೂರು ಬಂದ್‌ಗೆ ಸುರತ್ಕಲ್, ಬಜ್ಪೆ ಪರಿಸರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸುರತ್ಕಲ್:

ಇಲ್ಲಿನ ನಗರ ಪ್ರದೇಶದ ಹೆಚ್ಚಿನ ಅಂಗಡಿ ಮುಗ್ಗಟ್ಟುಗಳು ಬಾಗಿಲು ಮುಚ್ಚಿದ್ದವು. ಪ್ರತೀ ಖಾಸಗಿ ಬಸ್‌ಗಳು ಹಾಗೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ನಿಲ್ದಾಣ ಕೆಲವೇ ಕೆಲವು ಪ್ರಯಾಣಿಕರು ಮಾತ್ರ ಕಂಡು ಬರುತ್ತಿದ್ದರು.

ಖಾಸಗಿ ಬಸ್‌ಗಳು ಟ್ರಿಪ್‌ಗಳನ್ನು ಮಾಡದಿದ್ದರೂ ಸರಕಾರಿ ಜೆನ್‌ನರ್ಮ್ ಬಸ್‌ಗಳು ಬೆಳಗ್ಗೆ ಸುಮಾರು 10 ಗಂಟೆಯ ವರೆಗೆ ಪ್ರಯಾಣಿಕರಿಗೆ ಲಭ್ಯವಿತ್ತು. ಆ ಬಳಿಕ ಸುರತ್ಕಲ್ ಪೊಲಿಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ದುಷ್ಕರ್ಮಿಗಳು ಜೆನ್ ನರ್ಮ್ ಬಸ್‌ವೊಂದಕ್ಕೆ ಕಲುತೂರಾಟ ನಡೆಸಿದ ಕಾರಣ ಸರಕಾರಿ ಬಸ್‌ಗಳನ್ನೂ ಸ್ಥಗಿತ ಗೊಳಿಸಲಾಯಿತು.

ಬಸ್‌ನಲ್ಲಿ ಪ್ರಯಣಿಕರು ಹಾಗೂ ಕೆಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ತಕ್ಷಣ ಸ್ಪಂದಿಸಿದ ಮಂಗಳೂರು ಉತ್ತರ ವಲಯ ಶಾಸಕ ಮೊಯ್ದೀನ್ ಬಾವಾ ಡಿಪೊಗೆ ಕರೆ ಮಾಡಿ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಮತ್ತೊಂದು ಬಸ್‌ನ ವ್ಯವಸ್ಥೆ ಕಲ್ಪಿಸಿದರು ಎಂದು ತಿಳಿದು ಬಂದಿದೆ.

ಅಲ್ಲದೆ, ಸುರತ್ಕಲ್ ಪರಿಸರದ ಚಿಕ್ಕಬೆಟ್ಟು, ಕೃಷ್ಣಾಪುರ, ಕಾಟಿಪಳ್ಳ ಪ್ರದೇಶದಲ್ಲಿ ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು ಸೇರಿಂತೆ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯಾಚರಿಸಿದರವು. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶೀಕ್ಷಕರ ಕೊರರತೆ ಇದ್ದರೆ, ಸರಕಾರಿ ಕಚೇರಿಗಳಲ್ಲಿ ಕೆಲ ಸಿಬ್ಬಂದಿಯ ಕೊರತೆಯ ನಡುವೆಯೂ ಕಚೇರಿಗಳು ಕಾರ್ಯಾಚರಿಸಿದವು. ಅಲ್ಲದೆ, ಈ ಪ್ರದೆಶಗಳ ಮೀನು ಹಾಗೂ ತರಕಾರಿ ಮಾರುಕಟ್ಟೆಗಳಲ್ಲಿ ಎಂದಿನಂತೆ ಜನ ಜಮಾಯಿಸಿ ಕರೀದಿಗಲಲ್ಲಿ ತೊದಗಿದ್ದರು.

ರಿಕ್ಷಾ ಹಾಗೂ ಟ್ಯಾಕ್ಸಿ ಕಾರುಗಳು ಸಕ್ರೀಯವಾಗಿದ್ದ ಕಾರಣ ಜನತೆಗೆ ಬಂದ್‌ನ ಬಿಸಿ ಮುಟ್ಟಿಲಿಲ್ಲ. ಒಟ್ಟರೆಯಾಗಿ ಸುರತ್ಕಲ್ ಪ್ರದೇಶದಲ್ಲಿ ಜನತೆ ನೀರಸ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

ಬಜ್ಪೆ:

ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಘಪರಿವಾರ ಕರೆ ನೀಡಿದ್ದ ಬಂದ್‌ಗೆ ಜನತೆ ನೀರಸ ಪ್ರಕ್ರಿಯೆ ವ್ಯಕ್ತ ಪಡಿಸಿದ್ದಾರೆ.
 ಬಜ್ಪೆ ಪರಿಸರದಲ್ಲಿ ಖಾಸಗಿ ಬಸ್‌ಗಳು ತಮ್ಮ ಸಂಚಾರ ಸ್ತಬ್ಧಗೊಳಿಸಿದ್ದವು. ಬಜ್ಪೆ- ಜೋಕಟ್ಟೆ- ಮಂಗಳೂರಿಗೆ ಓಡಾಡುವ ಸರಕಾರಿ ಜೆನ್‌ನರ್ಮ್ ಸಿಟಿ ಬಸ್‌ಗಳು ಹಾಗೂ ರಿಕ್ಷಾಗಳು ಪ್ರಯಾಣಿಕರಿಗೆ ಆಸರೆಯಾದವು.

ಬಜ್ಪೆ ಪೇಟೆಯಲ್ಲಿ ಬೆಳಗ್ಗೆ ಸುಮಾರು 11ಗಂಟೆಯ ವರೆಗೆ ಬಾಗಿಲು ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು ಮಧ್ಯಾಹ್ನವಾಗುತ್ತಲೆ ತೆರೆದು ಕೊಂಡವು. ಅಲ್ಲದೆ, ಇಲ್ಲಿನ ಮೀನು ಮಾರುಕಟ್ಟೆ, ಮಾಂಸದ ಮಾರುಕಟ್ಟೆ ಸೇರಿದಂತೆ ತರಕಾರಿ ಮಾರುಕಟ್ಟೆಗಳಲ್ಲಿ ಗ್ರಾಹಕರು ಎಂದಿನಂತೆ ಖರೀದಿಯಲ್ಲಿ ತೊಡಗಿರುವ ದೃಶ್ಯಗಳು ಕಂಡು ಬಂದವು.

ಮಾರುಕಟ್ಟೆಲ್ಲಿರುವ ಮಾಂಸದ ಅಂಗಡಿಗಳು ಭರ್ಜರಿ ವ್ಯಾಪಾರ ನಡೆಸಿದರೆ, ಹೆದ್ದಾರಿ ಬದಿಯ ಹೊಟೇಲ್, ಅಂಗಡಿಗಳು ವ್ಯಾಪಾರ ವಹಿವಾಟಿನಲ್ಲಿ ನಿತವಾಗಿದ್ದವು.

ಪೊರ್ಕೋಡಿ, ಜೋಕಟ್ಟೆ ಪ್ರದೇಶಗಳ ಅಂಗಡಿ ಮುಂಗಟ್ಟುಗಳೂ ಬಜ್ಪೆಗೆ ಪೇಟೆಗೆ ಹೊರತಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News