ಸುಳ್ಯ: 'ಹಾವು, ನಾವು ಮತ್ತು ಪರಿಸರ' ಪ್ರಾತ್ಯಕ್ಷಿಕೆ, ಉಪನ್ಯಾಸ

Update: 2017-02-25 16:43 GMT

ಸುಳ್ಯ, ಫೆ.25: ನೆಹರು ಮೆಮೋರಿಯಲ್‌ ಕಾಲೇಜಿನ ಯುವ ರೆಡ್‌ಕ್ರಾಸ್‌ಘಟಕ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಹಾವು, ನಾವು ಮತ್ತು ಪರಿಸರ- ಪ್ರಾತ್ಯಕ್ಷಿಕೆ, ಉಪನ್ಯಾಸ ಮತ್ತು ಸಂವಾದಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪುತ್ತೂರಿನ ಶೇಷವನ ಚಾರಿಟೇಬಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರವೀಂದ್ರನಾಥ ಐತಾಳರು ಮಾತನಾಡಿ,ಪರಿಸರದಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅವನತಿಯ ಅಂಚಿನಲ್ಲಿರುವ ಹಾವುಗಳನ್ನು ನಾವು ರಕ್ಷಿಸಬೇಕಾದ ಅಗತ್ಯತೆಯಿದೆ. ಯಾವುದೇ ಹಾವುಗಳು ಮನುಷ್ಯನಿಗೆ ಅ ತೊಂದರೆಯನ್ನು ಮಾಡುವುದಿಲ್ಲ, ಅಲ್ಲದೇ ಅನೇಕ ಹಾವುಗಳಿಗೆ ವಿಷವಿಲ್ಲದಿದ್ದರೂ ತಪ್ಪುಕಲ್ಪನೆಯಿಂದಾಗಿ ಮನುಷ್ಯರಿಂದ ನಾಶವಾಗುತ್ತವೆ. ಆ ನಿಟ್ಟಿನಲ್ಲಿ ಹಾವುಗಳ ಬಗ್ಗೆ ಕನಿಷ್ಟ ಮಾಹಿತಿಯನ್ನಾದರೂ ಹೊಂದಿರಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರಗೌಡ ಕೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ವಿದ್ಯಾರ್ಥಿಕ್ಷೇಮಾಧಿಕಾರಿ ಡಾ.ಶಾಕೀರಾ ಜಬೀನ್, ಹಿರಿಯ ವಿದ್ಯಾರ್ಥಿ ಸಂಘದಅಧ್ಯಕ್ಷ ಚಂದ್ರಾಕೋಲ್ಚಾರ್, ಕಾರ್ಯದರ್ಶಿ ವಿಶ್ವನಾಥಕೆ.ಟಿ, ಖಜಾಂಚಿ ರಾಮಚಂದ್ರ ಪಲ್ಲತ್ತಡ್ಕ, ಯುವ ರೆಡ್‌ಕ್ರಾಸ್ ಘಟಕದ ನಾಯಕರಾದ ಅಭಿಜಿತ್ ಟಿ ಎಲ್ ಹಾಗೂ ಸಿಂಧೂರ ಎನ್ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೆಡ್‌ಕ್ರಾಸ್‌ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾಕುರುಂಜಿ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಥ್ವಿ ಸ್ವಾಗತಿಸಿ, ಶ್ರೇಯಶ್ರೀ ವಂದಿಸಿದರು. ಹರ್ಷಿತಾ ಕೆ ಎಂ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News