ಸುಳ್ಯ: ನಗದು ರಹಿತ ವ್ಯವಹಾರದ ತರಬೇತಿ ಕಾರ್ಯಕ್ರಮ

Update: 2017-02-25 17:08 GMT

ಸುಳ್ಯ, ಫೆ.25: ನೆಹರು ಮೆಮೋರಿಯಲ್ ಕಾಲೇಜಿನ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಅಸೋಸಿಯಷನ್ ವತಿಯಿಂದ ನಗದು ರಹಿತ ವ್ಯವಹಾರ ನಡೆಸುವ ಬಗ್ಗೆ ತರಬೇತಿ ಕಾರ್ಯಕ್ರಮವು ಸಮುದಾಯ ಆಧರಿತ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ನಗದುರಹಿತ ವ್ಯವಹಾರ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ವಿದ್ಯಾರ್ಥಿಗಳಿಗೆ ನೇರ ತರಬೇತಿಯನ್ನು ಕೊಡಲಾಯಿತು.
  ಸುಮಾರು 45 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಈ ವಿದ್ಯಾರ್ಥಿಗಳಿಂದ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಅರಂತೋಡು ಗ್ರಾಮದ ವಿಜಯಬ್ಯಾಂಕ್ ಮ್ಯಾನೇಜರ್ ಉದ್ದವ್ , ಅರಂತೋಡು ಗ್ರಾಮ ಪಂಚಾಯತ್‌ಯ ಉಪಾಧ್ಯಕ್ಷರಾದ ಶಿವಾನಂದ ಕುಕುಂಬಳ ತರಬೇತಿ ನೀಡಿದರು.
  ಕಾರ್ಯಕ್ರಮವನ್ನು ಎನ್.ಎಮ್.ಸಿಯ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್‌ನ ಸಂಚಾಲಕರಾದ ರುದ್ರಕುಮಾರ್ ಎಂ. ಅಭಿನಂದಿಸಿದರು. ಪ್ರಾಂಶುಪಾಲ ಗಿರಿಧರ ಗೌಡ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳಾದ ಸಹನಾ ಕಾರ್ಯಕ್ರಮ ನಿರೂಪಿಸಿದರು. ಗೌತಮಿ ಎಂ.ಆರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News