ಬಂಟ್ವಾಳ: ಫೆ. 26ಕ್ಕೆ ಪಿಎಫ್‌ಐ ಕೈಕಂಬ ವಲಯದಿಂದ ರಕ್ತದಾನ ಶಿಬಿರ

Update: 2017-02-25 17:53 GMT

ಬಂಟ್ವಾಳ, ಫೆ. 25: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 10ನೆ ವಾರ್ಷಿಕೋತ್ಸವದ ಪ್ರಯುಕ್ತ ಪಿಎಫ್‌ಐ ಕೈಕಂಬ ವಲಯ ಹಾಗೂ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಫೆಬ್ರವರಿ 26ರಂದು ಬೆಳಗ್ಗೆ 8:30ಕ್ಕೆ ಪರ್ಲಿಯಾ ನರ್ಸಿಂಗ್ ಹೋಮ್‌ನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಇಬ್ರಾಹೀಂ ಮಜೀದ್ ತುಂಬೆ ಪಾಲ್ಗೊಳ್ಳಲಿದ್ದಾರೆ ಎಂದು ಕೈಕಂಬ ವಲಯ ಕಾರ್ಯದರ್ಶಿ ರಹೀಮ್ ಪರ್ಲಿಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News