ಕಾಸರಗೋಡು: 28ರಂದು ಸುನ್ನೀ ಸಮ್ಮೇಳನ
ಮಂಗಳೂರು, ಫೆ. 26: ಜಿಲಾನಿ ಸ್ಟಡಿ ಸೆಂಟರ್ ವತಿಯಿಂದ ಫೆ. 28ರಂದು ಸಂಜೆ 5 ಗಂಟೆಗೆ ಕಾಸರಗೋಡು ಹೊಸ ಬಸ್ಸು ನಿಲ್ದಾಣದ ಬಳಿ ನಡೆಯುವ ಸುನ್ನೀ ಮಹಾ ಸಮ್ಮೇಳನದ ಉದ್ಘಾಟನೆಯನ್ನು ಗೌಸಿಯಾ ಸುನ್ನೀ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಖುತುಬುಝ್ಝುಮಾನ್ ಶೈಖ್ ಯೂಸುಫ್ ಸುಲ್ತಾನ್ ಶಾಹ್ ಖಾದ್ರಿಚಿಸ್ತಿ ಆಲುವ ನೆರವೇರಿಸಲಿದ್ದಾರೆ.
ಅಂದು ಸಂಜೆ 4 ಗಂಟೆಗೆ ಮಲಪ್ಪುರಂ ಅಲ್ ಮದೀನಾ ಎಜುಕೇಶನ್ ವಿದ್ಯಾರ್ಥಿಗಳಿಂದ ಸೂಫಿ ಕವಾಲಿ ನಡೆಯಲಿದೆ.
ಸೂಫಿ ಸಮ್ಮೇಳನದ ಅಧ್ಯಕ್ಷತೆಯನ್ನು ಗೌಸಿಯಾ ಸುನ್ನೀ ಜಂಇಯ್ಯತುಲ್ ಉಲಮಾದ ಶೈಖ್ ಅಬ್ದುರ್ರಹೀಂ ಮುಸ್ಲಿಯಾರ್ ವಹಿಸಲಿದ್ದಾರೆ.
ಇಸ್ಮಾಯೀಲ್ ಮುಸ್ಲಿಯಾರ್, ಶೈಖ್ ಸೈಯದ್ ಪೋಕೋಯ ತಂಙಳ್ ಇಯ್ಯಿಡ್, ಫಳ್‌ಲುಲ್ಲಾಹ್ ಫೈಝಿ, ಶೈಖ್ ಅಬ್ಬಾಸ್ ಫೈಝಿ, ಪ್ರೊ.ಕೂಡುಪಳ್ಳಿ ಅಬ್ದುಲ್ ಖಾದಿರ್, ಶೈಖ್ ಹುಸೈನ್ ಕೋಯ ತಂಙಳ್ ತಿರುವನಂತಪುರಂ, ಸೈಯದ್ ಝೈನುಲ್ ಆಬಿದೀನ್ ತಂಙಳ್ ಇಯ್ಯಿಡ್, ಡಾ.ಅಬ್ದುಲ್ ಹಕೀಂ ತಂಙಳ್ ಲಕ್ಷದ್ವೀಪ್, ಮೊಹಿಯುದ್ದೀನ್ ಬಾಖವಿ ಆಲುವ, ಅಬ್ದುರ್ರಝಾಕ್ ಸಖಾಫಿ ಮಂಗಳೂರು, ಅಬೂಬಕರ್ ಸಅದಿ, ಅಬ್ದುಲ್ ಮಜೀದ್ ಹುದವಿ ಮಲಪ್ಪುರಂ, ಅಬ್ದುರ್ರಹ್ಮಾನ್ ಬಾವಪುಣೆ, ಹಂಝ ಫೈಝಿ ತಲಪ್ಪಾಡಿ, ಅಬ್ದುಲ್ ಜಬ್ಬಾರ್ ಜೀಲಾನಿ ಎರ್ನಾಕುಲಂ, ಹಾಶಿಂ ಮನ್ನಾನಿ ತಿರುವನಂತಪುರಂ, ಮುಸ್ತಫಾ ಮನ್ನಾನಿ ಮಂಜೇರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.